Monday, November 23, 2026

ಪ್ರಾಯೋಗಿಕ ಆವೃತ್ತಿ

ಪಕ್ಷಿ ಸಂರಕ್ಷಣಾ ತಾಣ ಕೊಕ್ಕರೆ ಬೆಳ್ಳೂರಿನ ಅಂಚೆ ಲಕೋಟೆ ಲೋಕಾರ್ಪಣೆ

ವರದಿ : ಪ್ರಭು ವಿ ಎಸ್

ಮದ್ದೂರು ತಾಲ್ಲೂಕಿನ ಪಕ್ಷಿ ಸಂರಕ್ಷಣಾ ತಾಣವಾದ ಕೊಕ್ಕರೆ ಬೆಳ್ಳೂರಿನ ಇತಿಹಾಸವನ್ನು ಸಾರುವ ಅಂಚೆ ಲಕೋಟೆಯನ್ನು ಶಾಸಕ ಕೆ.ಎಂ.ಉದಯ್ ಬಿಡುಗಡೆ ಮಾಡಿದರು.

ಈ ವೇಳೆ ಅಂಚೆ ಇಲಾಖೆ ಅಧೀಕ್ಷಕ ಎಂ.ಡಿ.ಆಕಾಶ್ ಮಾತನಾಡಿ ಕೊಕ್ಕರೆ ಬೆಳ್ಳೂರು ಹೆಸರಿನ ಅಂಚೆ ಲಕೋಟೆ ವಿಶೇಷವಾಗಿದ್ದು ಇದು ಇಡೀ ದೇಶದಲ್ಲೇ ಉದ್ಘಾಟನೆಯಾಗಿ ಲಕೋಟೆ ಐತಿಹಾಸಿಕ ಸ್ಥಳಗಳ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಅಂಚೆ ಇಲಾಖೆಯು ಆಯಾ ವಿಷಯದ ಮಹತ್ವನ್ನು ದಾಖಲಿಸುವ ಉದ್ದೇಶದಿಂದ ಬಿಡುಗಡೆ ಮಾಡಿದ್ದು ಕೊಕ್ಕರೆ ಬೆಳ್ಳೂರು ಗ್ರಾಮದ ಇತಿಹಾಸವು ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪಸರಿಸುವುದಾಗಿ ಹೇಳಿದರು.

ಇದು ಸಾಮಾನ್ಯ ಅಂಚೆ ಲಕೋಟೆಗಳಿಗಿಂತ ಭಿನ್ನವಾಗಿದ್ದು ಸಂಗ್ರಹಕಾರರಿಗೆ ಹೆಚ್ಚಿನ ಮೌಲ್ಯವನ್ನು ಹೊಂದಿರುವುದಾಗಿ ಹಾಗೂ ಅಂಚೆ ಲಕೋಟೆ ಬಿಡುಗಡೆಗೆ ಕದಲೂರು ಉದಯ್ ಚಾರಿಟಬಲ್
ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಿರುವುದಾಗಿ ತಿಳಿಸಿದರು.

ಮೂಲ ಸೌಲಭ್ಯಗಳಿಗೆ ಒತ್ತು

ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮೂಲ ಸೌಲಭ್ಯಗಳಿಗೆ ಒತ್ತು ನೀಡಿರುವ
ಗ್ರಾ.ಪಂ. ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವೆಂದು ಶಾಸಕ ಕೆ.ಎಂ.ಉದಯ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ 18 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ತಾಲೂಕಿನ ಕಸಬಾ ಹೋಬಳಿಯ ಇತಿಹಾಸ ಪ್ರಸಿದ್ಧ ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಕೂಸಿನ ಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಇಚ್ಚಾಶಕ್ತಿ ಒಗ್ಗಟ್ಟು ಕಾರ್ಯಕ್ಷೇತ್ರದಲ್ಲಿ ಒಲವು ಇದ್ದಲ್ಲಿ ಇಂತಹ ಹಲವಾರು ಕಾಮಗಾರಿಗಳನ್ನು ಮಾಡುವುದರ ಮೂಲಕ ಮಾದರಿ ಗ್ರಾ.ಪಂ. ಆಗಿ ಮಾರ್ಪಾಡು ಮಾಡಬಹುದೆಂದು
ಹೇಳಿದರು.

ಚುನಾವಣೆಗಳಲ್ಲಿ ಗೆದ್ದ ನಂತರ ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂಧಿಸುವ ಜತೆಗೆ ತಮ್ಮ
ಕಾರ್ಯಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಬಹುತೇಕ ಕರುಹುಗಳನ್ನು ಬಿಟ್ಟುಹೋಗುವ ಮೂಲಕ ಮುಂದಿನ ಪೀಳಿಗೆಗೂ ಅದನ್ನು ಪರಿಚಯಿಸುವಂತಹ ಕೆಲಸವಾಗಬೇಕಿದ್ದು ಅಂತಹ ಕೆಲಸವನ್ನು ಕೊಕ್ಕರೆ ಬೆಳ್ಳೂರು ಗ್ರಾ.ಪಂ. ಅಧ್ಯಕ್ಷರು ಹಾಗೂ ಆಡಳಿತ ವರ್ಗ ಮಾಡಿರುವುದು ಶ್ರೇಷ್ಠ ಸಾಧನೆಯೆಂದು ಬಣ್ಣಿಸಿದರು.

ಈ ವೇಳೆ ಗ್ರಾ.ಪಂ. ಅಧ್ಯಕ್ಷ ಕೆಂಪರಾಜು, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಅಂಚೆ ಇಲಾಖೆಯ ಸಹಾಯಕರಾದ ರಾಜು ಕಾಳೇಶ್ವರ, ಟಿ.ಎಲ್.ನಾಗೇಶ್, ಕೆಂಪರಾಜು, ಚೈತ್ರ ಶಶಿಧರ್, ಗ್ರಾ.ಪಂ. ಸದಸ್ಯರಾದ ಸುಂದ್ರಮ್ಮ,ಮಾದೇಶ್ ಭಾಗ್ಯಮ್ಮ, ಶಶಿರೇಖಾ, ಜಯಮ್ಮ, ಗೀತಾಪ್ರಸನ್ನ, ಸಿದ್ಧಪ್ಪ, ದಿವ್ಯರಾಮಶೆಟ್ಟಿ, ಮುಖಂಡರಾದ ಜೆ.ಸುರೇಶ್, ಶಿವಣ್ಣ, ಗುಜ್ಜೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ