Friday, November 20, 2026

ಪ್ರಾಯೋಗಿಕ ಆವೃತ್ತಿ

ಗಾಂಧಿಯನ್ನು ಕೊಂದ ಪರಿವಾರವೇ ಸಂವಿಧಾನ ಕೊಲ್ಲಲು ಹೊರಟಿದೆ : ಭರತ್ ರಾಜ್

ಮಹಾತ್ಮ ಗಾಂಧಿಜೀ ಅವರನ್ನು ಕೊಂದ ಸಂತಾನವೇ ಇಂದು ಗಾಂಧಿ ವಿಚಾರಧಾರೆ ಹಾಗೂ ಸಂವಿಧಾನವನ್ನು ನಾಶಗೊಳಿಸಲು ಹೊರಟಿದೆ, ಸ್ವ ಹಿತಾಸಕ್ತಿಗಾಗಿ ರಾಜಕೀಯ ಲಾಭಕ್ಕಾಗಿ ದೇವರು, ಧರ್ಮ, ಭಾಷೆ ಎಲ್ಲವನ್ನೂ ದುರುಪಯೋಗಪಡಿಸಿಕೊಂಡು ಜನರನ್ನ ದಿಕ್ಕು ತಪ್ಪಿಸುವ ಯತ್ನವನ್ನು ನಡೆಸುತ್ತಿದ್ದಾರೆ ಎಂದು
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಕಿಡಿಕಾರಿದರು.

ಮಳವಳ್ಳಿ ಪಟ್ಟಣದ ರಂಗನಾಥ ಕಾಂಪ್ಲೆಕ್ಸ್ ನಲ್ಲಿ ವಿಶ್ವಮಾನವ ವಿಚಾರ ವೇದಿಕೆ, ಕಸ್ತೂರಿ ಸಿರಿಗನ್ನಡ ವೇದಿಕೆ ,
ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ವಿಚಾರಧಾರೆ ಹಾಗೂ ಸಂವಿಧಾನದ ಮಹತ್ವ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡಿಸಿದರು.

ಗಾಂಧಿಯವರು ದೇಶದ ಸೌಹಾರ್ದತೆಗಾಗಿ ಸ್ವಾತಂತ್ರ ಸಂಭ್ರಮದಲ್ಲೂ ಪಾಲ್ಗೊಳ್ಳದೆ ಅಂದು ಕೋಮುಗಲಭೆಯು ನಡೆಯುತ್ತಿದ್ದ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆಗಾಗಿ ಹೋರಾಡುತ್ತಿದ್ದರು, ಅಹಿಂಸಾ ಮಾರ್ಗದಿಂದ ಸ್ವತಂತ್ರ ಚಳವಳಿಯನ್ನ ಬಡಿದೆಬ್ಬಿಸಿದರು, ಅಂತಹ ಗಾಂಧಿಯನ್ನು ಹಿಂದು ಮೂಲಭೂತವಾದಿ ಸನಾತನವಾದಿಯಾದ ನಾಥುರಾಂ ಗೋಡ್ಸೆ ಎಂಬ ಹಂತಕ ಗಾಂಧಿಯವರನ್ನು ಹತ್ಯೆ ಮಾಡಿದರು, ಇಂದು ಅವರದೆ ಸಂತಾನ ಅವರ ವಿಚಾರಧಾರೆಗಳನ್ನು ಹಾಳು ಮಾಡುತ್ತಿದೆ ಎಂದರು.

ನಮ್ಮ ದೇಶದ ಸಂವಿಧಾನ ಮಾದರಿಯಾಗಿದೆ, ಅದನ್ನ ನಾಶಗೊಳಿಸಿ ಮತ್ತೊಮ್ಮೆ  ಬಂಡವಾಳಶಾಹಿ ಭೂ ಮಾಲೀಕ ಪದ್ದತಿ, ಮನುವಾದವನ್ನು ಜಾರಿ ಮಾಡಲು ಬಿಜೆಪಿ, ಸಂಘ ಪರಿವಾರಗಳು ಹವಣಿಸುತ್ತಿದೆ, ದೇವರು, ಧರ್ಮ, ಎಲ್ಲವೂ ಮನುಷ್ಯನ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಆಹಾರ ಹಕ್ಕಿನ ಮೇಲೆ ದಾಳಿ,
ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ, ವಾಕ್ ಸ್ವಾತಂತ್ರದ ಮೇಲೆ ದಾಳಿ ನಡೆಸುವುದರ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲು ಹೊರಟಿರುವ ಕೋಮುವಾದಿ ಮತೀಯವಾದಿ ಶಕ್ತಿಗಳ ವಿರುದ್ಧ ಎಚ್ಚರದಿಂದ ಇರಬೇಕು ಎಂದರು.

ಕುವೆಂಪುರವರ ಹೇಳಿ ಹಾಗೇ ಭಾರತ ಒಂದು ಸರ್ವ ಜನಾಂಗದ ಶಾಂತಿಯ ತೋಟವಾಗಿ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಸುಂದರ ಸಮ ಸಮಾಜ ನಿರ್ಮಾಣವಾಗಬೇಕು . ಅದಕ್ಕಾಗಿ ದೇವರು, ಧರ್ಮ ಜಾತಿಗಳಲ್ಲಿ ನಮ್ಮದು ಶ್ರೇಷ್ಠ, ಅತಿ ಶ್ರೇಷ್ಠ ಮತ್ತೊಂದು ಕನಿಷ್ಠ ಎನ್ನುವಂತಹ ಮನೋಭಾವದಿಂದ ಹೊರಕ್ಕೆ ಬರಬೇಕೆಂದರು.

ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ.ಸುಮಿತ್ರ, ಕಸ್ತೂರಿ ಸಿರಿಗನ್ನಡ ವೇದಿಕೆಯ ಪೋತೇರ ಮಹಾದೇವು ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತಿಗಳಾದ ಮ ಸಿ ನಾರಾಯಣರವರ 75ನೇ ಹುಟ್ಟುಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಲಾಯಿತು. ಪಿ ಸುಂದ್ರಪ್ಪ ಲಿಂಗಪಟ್ಟಣ, ಸಾಲುಮರದ ನಾಗರಾಜ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಂಭುಲಿಂಗೇಗೌಡ, ಮಲ್ಲಿಕಾರ್ಜುನಸ್ವಾಮಿ, ಅಂದಾನಿಗೌಡ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ