Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೊಮ್ಮೂರು ಅಗ್ರಹಾರ ನಿವಾಸಿಗಳಿಂದ ಮತದಾನ ಬಹಿಷ್ಕಾರ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮೂರು ಅಗ್ರಹಾರ ನಿವಾಸಿಗಳಿಗೆ ಜನಪ್ರತಿನಿಧಿಗಳಾಗಿ ಹಾಗೂ ಜಿಲ್ಲಾಡಳಿತವಾಗಲಿ ಕಳೆದ ಐದಾರು ದಶಕಗಳಿಂದ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಅಲ್ಲಿನ ನಿವಾಸಿಗಳು ಈ ಬಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಕಳೆದ ಐದಾರು ದಶಕಗಳಿಂದ 56 ಕುಟುಂಬಗಳು ಇಲ್ಲಿ ನೆಲೆಸಿವೆ. ಈ ಪೈಕಿ 5 ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. 10 ಮನೆಗಳಿಗೆ ಗ್ರಾ.ಪಂ.ವತಿಯಿಂದ ಖಾತೆ ಮಾಡಿಕೊಡಲಾಗಿದೆ. ಇನ್ನೂಳಿದದ 41 ಕುಟುಂಬಗಳಿಗೆ ಹಕ್ಕುಪತ್ರಗಳನ್ನೇ ನೀಡಿಲ್ಲ, ಕಳೆದ ಐದಾರು ವರ್ಷಗಳಿಂದೀಚೆಗೆ ವಕ್ಫ್ ಬೋರ್ಡ್ ಅಧಿಕಾರಿಗಳು, ಈ ಜಾಗ ನಮ್ಮದು ಖಾಲಿ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳೆಲ್ಲ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಎಲ್ಲಿ ಒಕ್ಕಲೆಬ್ಬಿಸಿ ಬಿಡುತ್ತಾರೋ ಎಂಬ ಆತಂಕದಲ್ಲಿ ಬದುಕು ನಡೆಸುತ್ತಿದ್ದೆವೆಂದು ಗ್ರಾಮದ ಮುಖಂಡ ವೆಂಕಟೇಶ್ ತಿಳಿಸಿದ್ದಾರೆ.

ಹಕ್ಕುಪತ್ರಗಳನ್ನು ನೀಡುವಂತೆ ಶಾಸಕರು, ಸೇರಿದಂತೆ ಹಲವು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಆದರೆ ಇದುವರೆಗೆ ಅವರು ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಂಡಿಲ್ಲ, ಈ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆಂದು ಗ್ರಾ.ಪಂ.ಸದಸ್ಯರಾದ ಚಿಂತನ್, ಮಣಿ, ಮುಖಂಡರಾದ ಕುಮಾರ್, ಸಿದ್ದರಾಜು ಹಾಗೂ ಸೋಮ ಶೇಖರ್ ನುಡಿ ಕರ್ನಾಟಕ.ಕಾಂ ಗೆ ಮಾಹಿತಿ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ