ವರದಿ: ನಾಗಮ್ಮ
ಹಣಕಾಸಿನ ವಿಚಾರವಾಗಿ ಬಾರ್ಬೆಂಡರ್ ನ ಕತ್ತು ಸೀಳಿ ಧಾರುಣವಾಗಿ ಹತ್ಯೆ ಮಾಡಿರುವ ಘಟನೆ ಮದ್ದೂರು ತಾಲೂಕು ಕೆಎಂ ದೊಡ್ಡಿಯ ಮಂಡ್ಯ ರಸ್ತೆಯಲ್ಲಿ ಜರುಗಿದೆ.
ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದ 31 ವರ್ಷದ ಮಂಟೇಸ್ವಾಮಿ ಕೊಲೆಯಾದ ವ್ಯಕ್ತಿ. ಮಂಡ್ಯ ರಸ್ತೆಯ ಜಮೀನು ಒಂದರಲ್ಲಿ ಕತ್ತು ಕೊಯ್ದು ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಮಂಟೇಸ್ವಾಮಿ ಸೋಮವಾರ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಈತನನ್ನು ಹುಡುಕಿಕೊಂಡು ಸಂಬಂಧಿಕರು ಹೋಗುವಾಗ ಆತನ ಬೈಕನ್ನು ಜಮೀನು ಬಳಿ ನೋಡಿದ್ದಾರೆ. ನಂತರ ಈತನನ್ನು ಹುಡುಕುವಾಗ ಮೃತದೇಹ ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಕೊಲೆಯಾದ ಸಂಬಂಧಿಕರ ಗೋಳು ಹೇಳು ತೀರದಾಗಿದೆ. ಕೊಲೆಯಾದ ವ್ಯಕ್ತಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಕೆ ಎಂ ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ




