Thursday, November 19, 2026

ಪ್ರಾಯೋಗಿಕ ಆವೃತ್ತಿ

ಯುಪಿಎಸ್ಸಿ ಪರೀಕ್ಷೆಯಲ್ಲಿ ಮಳವಳ್ಳಿ ಯುವಕನ ಸಾಧನೆ

ಮಳವಳ್ಳಿ ತಾಲೂಕು ಬಿರೋಟ ಗ್ರಾಮದ ಬಿ.ಎಸ್.ಚಂದನ್ ಅವರು ಕೇಂದ್ರ ಲೋಕಸಭಾ ಆಯೋಗ ನಡೆಸಿದ ಯುಪಿಎಸ್ಸಿ ಪರೀಕ್ಷೆಯಲ್ಲಿನ 731ನೇ ರ್‍ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಗ್ರಾಮದ ರೈತ ಸಣ್ಣೇಗೌಡ ಹಾಗೂ ಸವಿತಾ ದಂಪತಿಯ ಪುತ್ರ ಚಂದನ್, ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಹಿಂದೆ ಸಹೋದರ ಬಿ.ಎಸ್.ಚೇತನ್ ಶ್ರಮ ಸಾಕಷ್ಟಿದೆ. ಕಾರಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ತಮ್ಮನ ವ್ಯಾಸಂಗಕ್ಕೆ ಆರ್ಥಿಕ ಹಾಗೂ ನೈತಿಕ ಬೆಂಬಲವಾಗಿ ನಿಂತಿದ್ದಾರೆ.

ಮೇಷ್ಟ್ರುದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ಚಂದನ್, ಪ್ರೌಢ ವ್ಯಾಸಂಗವನ್ನು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ಶೇ.91.8 ಅಂಕಗಳಿಸಿ ಪಿಯುಸಿ ಶಿಕ್ಷಣಕ್ಕೆ ಕೆ.ಎಂ.ದೊಡ್ಡಿಯ ಭಾರತೀ ವಿದ್ಯಾಸಂಸ್ಥೆಗೆ ಸೇರಿದ ಅವರು, ವಿಜ್ಞಾನ ವಿಭಾಗದಲ್ಲಿ ಕಲಿತು ದ್ವಿತೀಯ ಪಿಯುಸಿಯಲ್ಲಿ ಶೇ.85.5 ಅಂಕ ಪಡೆದರು. ಬಳಿಕ ಇದೇ ಕಾಲೇಜಿನಲ್ಲಿ ಬಿಎಸ್ಸಿಯನ್ನು ಶೇ.70 ಅಂಕದೊಂದಿಗೆ ಪೂರ್ಣಗೊಳಿಸಿದರು. ಇದಾದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಚಂದನ್ ಆಸ್ಥೆ ವಹಿಸಿ, ದಿನಕ್ಕೆ 12ರಿಂದ 14 ಗಂಟೆ ಸಮಯವನ್ನು ಓದುವುದಕ್ಕೆ ಮೀಸಲಿಟ್ಟಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕೋಚಿಂಗ್ ಕ್ಲಾಸ್‌ ನಲ್ಲಿ ತರಬೇತಿ ಪಡೆದ ಅವರು 2021ರಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಮೊದಲ ಪ್ರಯತ್ನ ನಡೆಸಿ,ವಿಫಲರಾದರು. ಛಲಬಿಡದೆ ಕಷ್ಟಪಟ್ಟು ಓದಿದ ಪರಿಣಾಮ 2022ರಲ್ಲಿ ಬೆಂಗಳೂರಿನಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗುತ್ತಾರೆ. ಕರ್ತವ್ಯದ ಜತೆಗೆ ಯುಪಿಎಸ್ಸಿ ಪರೀಕ್ಷೆಗೂ ಸಿದ್ಧವಾದರು, ಈ ನಡುವೆ ಪರೀಕ್ಷೆ ಬರೆದರೂ ಯಶಸ್ಸು ಸಿಕ್ಕಿರಲಿಲ್ಲ. 2023ರಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ