Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಿಎಸ್‌ಪಿ ಸಂಸ್ಥಾಪನ ದಿನಾಚರಣೆ : ಸ್ಥಳೀಯ ಚುನಾವಣೆ ಗೆಲ್ಲುವ ವಿಶ್ವಾಸ

ಬಹುಜನರು ರಾಜ್ಯಾಧಿಕಾರದ ಪ್ರಜ್ಞೆ ಹೆಚ್ಚಿಸಿಕೊಂಡರೆ ಸ್ಥಳೀಯ ಚುನಾವಣೆ ಗೆಲ್ಲಬಹುದು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷ ಸಂಸ್ಥಾಪನಾ ದಿನ ಮತ್ತು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದೇಶದಲ್ಲಿ ಬಿಎಸ್ಪಿ ಸ್ಥಾಪನೆಯಾಗಿ ಕೇವಲ 41ವರ್ಷಗಳಾಗಿವೆ, ಬಹುಜನ ಚಳುವಳಿಯ ಮೂಲಕ ವಿಜ್ಞಾನಿ ಮತ್ತು ರಾಜಕೀತ ತಜ್ಞ ದಾದಾಸಾಹೇಬ್ ಕಾನ್ಶಿರಾಂ ಅವರು ಜನರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತಗಳ ಬಗ್ಗೆ ಅರಿವು ಹೆಚ್ಚಿಸಿದರು ಎಂದು ಸ್ಮರಿಸಿದರು.

ಇಂದಿಗೆ ಬಿಎಸ್‌ಪಿ ಪಕ್ಷವು ಭಾರತದೇಶದ ಪ್ರತಿ ಹಳ್ಳಿ ಹಳ್ಳಿಯ ಮತದಾರರಲ್ಲಿ ವಿಶ್ವಾಸ ಹೆಚ್ಚಿಸಿ, ರಾಜಕೀಯ ಪ್ರಜ್ಞೆ ಮೂಡುವಂತೆ ಮಾಡಿದೆ, ಸಾಕಷ್ಟು ರಾಜಕೀಯ ಲೆಕ್ಕಚಾರವನ್ನು ತಲಕೆಳಗಾಗಿಸಿ, ಹೊಸ ದಿಕ್ಸೂಚಿ ಬರೆಯಲು ಮುಂದಾಗಿದೆ, ಹಲವು ಬಲಾಡ್ಯ ಪಕ್ಷಗಳಿಗೆ ನಿದ್ದೆಗೆಡಿಸಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ರಾಜ್ಯಾಧಿಕಾರ ಇಡಿಯುವ ಮೂಲಕ ಈ ವಿಶ್ವದಲ್ಲಿಯೇ ಹೊಸ ಸಂಚಲನ ಸೃಷ್ಠಿಸಿ, ಕರ್ನಾಟಕ ರಾಜ್ಯ ಸೇರಿದಂತೆ ಹಲವು ರಾಜ್ಯಗಳಲ್ಲಿನ ಶೋಷಿತ ಸಮುದಾಯಗಳಲ್ಲಿ ಹೊಸ ರಾಜಕೀಯ ಅಧಿಕಾರದ ಭರವಸೆಯನ್ನು ಮೂಡಿಸಿ, ಸಂಘಟನೆ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳಾದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಪಕ್ಷ ಸಂಘಟನೆಯೊAದಿಗೆ ಬೂತ್ ಮಟ್ಟದಲ್ಲಿ ಅನೆಬಲ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದಿನ ಉದ್ಯಾನವನದಲ್ಲಿರುವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲಾರ್ಪಣೆ ಮಾಡಿ, ಗೌರವ ವಂದನೆ ಸಲ್ಲಿಸಿ ಘೋಷಣೆಗಳನ್ನು ಕೂಗಿದರು.

ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಚಲುವರಾಜ್ ಚಿಕ್ಕಗಾಡಿಗನಹಳ್ಳಿ, ಜಿಲ್ಲಾ ಉಸ್ತುವಾರಿ ವೀರಭದ್ರಯ್ಯ ಹಾಗೂ ಮದ್ದೂರು ಬೋರಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿ.ವಿನಯ್ ಕುಮಾರ್, ಶ್ರೀರಂಗಪಟ್ಟಣ ತಾ.ಅಧ್ಯಕ್ಷ ಹೆಚ್.ಜೆ.ಸತೀಶ್, ಕೆ.ಆರ್.ಪೇಟೆ ತಾ.ಅಧ್ಯಕ್ಷ ನವೀನ್ ಕುಮಾರ್, ಮದ್ದೂರು ತಾ.ಅಧ್ಯಕ್ಷ ಶಂಕರ್ ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ