Friday, November 20, 2026

ಪ್ರಾಯೋಗಿಕ ಆವೃತ್ತಿ

ಮೇ 10ರಂದು ಬುದ್ದ ಚಿತ್ರ ಬಿಡಿಸುವ ಸ್ಪರ್ಧೆ ; ಶಿವರಾಜ್

ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಬುದ್ದ ಜಯಂತಿಯ ಅಂಗವಾಗಿ ಮಕ್ಕಳಿಗಾಗಿ ಬುದ್ಧ ಚಿತ್ರ ಬಿಡಿಸುವ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಮೇ ೧೦ ರಂದು ಬೆಳಿಗ್ಗೆ ೧೧ರಿಂದ ೦೧ವರೆಗೆ ಮಂಡ್ಯ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾಸಭಾದ ರಾಜ್ಯ ಉಪಾಧ್ಯಕ್ಷ ಎಂ.ಸಿ.ಶಿವರಾಜ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ಬುದ್ಧ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸುತ್ತಿರುವುದು ಸ್ವಾಗತಾರ್ಹ. ಬುದ್ದ ಜಯಂತಿಯ ಹಿನ್ನೆಲೆಯಲ್ಲಿ  ಚಿತ್ರ ಬಿಡುಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸ್ಪರ್ಧೆಯು ೦೧ನೇ ತರಗತಿಯಿಂದ ೪ನೇ ತರಗತಿ, ೦೫ನೇ ತರಗತಿಯಿಂದ ೦೭ನೇ ತರಗತಿ, ೦೮ನೇ ತರಗತಿಯಿಂದ ೧೦ನೇ ತರಗತಿಯ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ತರಗತಿ ಹಾಗೂ ಶಾಲೆಯ ಗುರುತಿನ ಮಾಹಿತಿಯೊಡನೆ ಹಾಜರಾಗಬೇಕು, ಚಿತ್ರ ಬಿಡಸಲು ಡ್ರಾಯಿಂಗ್ ಹಾಳೆ ಒದಗಿಸಲಾಗುವುದು, ಇತರೆ ಪರಿಕರಗಳನ್ನು ಸ್ಪರ್ಧಾ ಮಕ್ಕಳೇ ತರತಕ್ಕದ್ದು ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಪುಸ್ತಕ, ಪ್ರಶಸ್ತಿ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧ್ಯಕ್ಷ ವೆಂಕಟೇಶ್- ೯೪೪೮೭೫೫೧೩೨, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್-೯೮೪೪೪೭೧೫೨೯ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅನಿಲ್‌ಕುಮಾರ್, ಟಿ.ಡಿ.ನಾಗರಾಜ್, ಎಸ್.ಪಿ.ನಾರಾಯಣಸ್ವಾಮಿ, ಗುರುಮೂರ್ತಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ