Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜು.23ಕ್ಕೆ ಯಾವ್ಯಾವ ಗ್ರಾ. ಪಂ.ಗಳಲ್ಲಿ ಉಪಚುನಾವಣೆಯ ಮತದಾನ ನಡೆಯಲಿದೆ… ಇಲ್ಲಿದೆ ಸಂಪೂರ್ಣ ಮಾಹಿತಿ….

ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಲು ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟವಾಗಿದೆ.

ಮದ್ದೂರು ತಾಲ್ಲೂಕು
ಮದ್ದೂರು ತಾಲ್ಲೂಕಿನ 3-ಹೊಸಗಾವಿ ಗ್ರಾಮ ಪಂಚಾಯಿತಿಯ 2-ಹೊಸಗಾವಿ- 2 ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಹಿಂ. ವರ್ಗ “ಅ” ಮಹಿಳೆಗೆ ಮೀಸಲಿರುತ್ತದೆ.

14-ಕದಲೂರು ಗ್ರಾಮ ಪಂಚಾಯಿತಿಯ 5-ಹೊಸಹಳ್ಳಿ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಅನುಸೂಚಿತ ಜಾತಿ  ಮಹಿಳೆಗೆ ಮೀಸಲಿರುತ್ತದೆ.

22-ಕೆ.ಹೊನ್ನಲಗೆರೆ ಗ್ರಾಮ ಪಂಚಾಯಿತಿಯ 4-ರಾಜೇಗೌಡನದೊಡ್ಡಿ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿರುತ್ತದೆ.

29-ಕ್ಯಾತಘಟ್ಟ ಗ್ರಾಮ ಪಂಚಾಯಿತಿಯ 8-ಅಜ್ಜಹಳ್ಳಿ-2 ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಅನುಸೂಚಿತ ಜಾತಿ ಮಹಿಳೆಗೆ ಮೀಸಲಿರುತ್ತದೆ.

ಮಳವಳ್ಳಿ ತಾಲ್ಲೂಕು
ಮಳವಳ್ಳಿ ತಾಲ್ಲೂಕಿನ 01-ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯ 1-ಮಾರೇಹಳ್ಳಿ ಬಿಟ್ಟು ಗ್ರಾಮಾಂತರ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿರುತ್ತದೆ.

15-ಕಗ್ಗಲೀಪುರ ಗ್ರಾಮ ಪಂಚಾಯಿತಿಯ 1-ಕಗ್ಗಲೀಪುರ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಹಿಂ. ವರ್ಗ “ಅ” ಮಹಿಳೆಗೆ ಮೀಸಲಿರುತ್ತದೆ.

39-ಬೆಳಕವಾಡಿ  ಗ್ರಾಮ ಪಂಚಾಯಿತಿಯ 4-ಬೆಳಕವಾಡಿ-4 ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಅನುಸೂಚಿತ ಜಾತಿ ಮಹಿಳೆಗೆ ಮೀಸಲಿರುತ್ತದೆ.

ಪಾಂಡವಪುರ ತಾಲ್ಲೂಕು
ಪಾಂಡವಪುರ ತಾಲ್ಲೂಕಿನ 6-ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯ 6-ಸಣಬ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿರುತ್ತದೆ.

8-ಕನಗನಮರಡಿ ಗ್ರಾಮ ಪಂಚಾಯಿತಿಯ 5-ಕುರಹಟ್ಟಿ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಪ.ಪಂ.ಮಹಿಳೆಗೆ ಮೀಸಲಿರುತ್ತದೆ.

ಶ್ರೀರಂಗಪಟ್ಟಣ ತಾಲ್ಲೂಕು
ಶ್ರೀರಂಗಪಟ್ಟಣ ತಾಲ್ಲೂಕಿನ 13-ಕೊಡಿಯಾಲ ಗ್ರಾಮ ಪಂಚಾಯಿತಿಯ 5-ಪೀಹಳ್ಳಿ-2 ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಹಿಂದುಳಿದ ವರ್ಗ “ಅ” ಮೀಸಲಿರುತ್ತದೆ.

ಕೆ.ಆರ್.ಪೇಟೆ  ತಾಲ್ಲೂಕು
ಕೆ.ಆರ್.ಪೇಟೆ  ತಾಲ್ಲೂಕಿನ 28-ಐಕನಹಳ್ಳಿ ಗ್ರಾಮ ಪಂಚಾಯಿತಿಯ 7-ಮಂಡಲೀಕನಹಳ್ಳಿ ಕ್ಷೇತ್ರದ  1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಥಾನವು ಸಾಮಾನ್ಯ ಮಹಿಳೆ ಮೀಸಲಿರುತ್ತದೆ.

ಜುಲೈ 6ಕ್ಕೆ ಅಧಿಸೂಚನೆ ಪ್ರಕಟ

ಮಂಡ್ಯ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಜುಲೈ 6 ರಂದು ಹೊರಡಿಸಲಿದ್ದು, ನಾಮಪತ್ರಗಳನ್ನು ಜುಲೈ 6 ರಿಂದ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು ಜುಲೈ 12 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಜುಲೈ 13 ರಂದು ನಡೆಯಲಿದೆ.

ಉಮೇದುವಾರಿಕೆಯನ್ನು ಹಿಂಪಡೆಯಲು ಜುಲೈ 15 ಕೊನೆಯ ದಿನಾಂಕವಾಗಿದ್ದು, ಮತದಾನವು ಜುಲೈ 23 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆ ಜುಲೈ 26 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ನಡೆಸಲು 11  ಚುನಾವಣಾಧಿಕಾರಿ ಹಾಗೂ 11 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜು.6ರಿಂದ ಜು.26ರವರೆಗೆ ಜಾರಿಯಲ್ಲಿರುತ್ತದೆ. ಆ ಗ್ರಾಮ ಪಂಚಾಯಿತಿಯ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ನಿಂತು ಹೋಗುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದೆ. ಜು.8ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇಸ್ಸಟ್ರುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಈ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸುವುದಿಲ್ಲ.

ಗ್ರಾಮ ಪಂಚಾಯಿತಿ ಉಪ ಚುನಾವಣೆಯು ಮತಪತ್ರಗಳ ಮೂಲಕ ನಡೆಯಲಿದ್ದು, ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕ ಘಟಕಗಳನ್ನು ಅದರ ಮಾಲೀಕರು, ಅದಿಭೋಗದಾರರು ಸಂದರ್ಭಾನುಸಾರ ಅದರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ