Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಗಾಂಜಾ ಗಿಡ ಪತ್ತೆ

ಮಂಡ್ಯನಗರದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಎರಡು ಗಾಂಜಾ ಗಿಡ ಬೆಳೆದಿರುವುನ್ನು ಅಬಕಾರಿ ಪೊಲೀಸರು ಬುಧವಾರ ಪತ್ತೆ ಹಚ್ಚಿದ್ದಾರೆ.

ಒಂದು ಗಿಡ 3 ಮೀಟರ್ ಇದ್ದರೆ, ಮತ್ತೊಂದು ಗಿಡ 1.9 ಮೀ ಉದ್ದ ಇದ್ದು, ಎರಡು ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ನಡೆಸಿದ ಅಬಕಾರಿ ನಿರೀಕ್ಷಕಿ ವನಿತಾ.ಜಿ.ಸಿ ಮಾತನಾಡಿ, ಯಲಿಯೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಡ್ಯ ನಗರದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ದೊರೆತ ನಂತರ ನ್ಯಾಯಾಲಯದಿಂದ ವಾರೆಂಟ್ ಪಡೆದು, ಸರ್ಕಾರಿ ಆಸ್ತಿಯೊ, ಖಾಸಗಿ ಆಸ್ತಿಯೋ ಎಂಬ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಕಂದಾಯ ಇಲಾಖೆ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿದಾಗ ಅಕ್ರಮವಾಗಿ ಎರಡು ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿದೆ, ಈ ಬಗ್ಗೆ ತನಿಖೆ ನಡೆದಿದ್ದು ಆರೋಪಿಗಳ ಪತ್ತೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಅಬಕಾರಿ ಇಲಾಖೆ ಮಂಡ್ಯ ವಲಯ ಉಪ ನಿರೀಕ್ಷಕರ ರವಿಕುಮಾರ್ ಕೆ, ಸಿಬ್ಬಂದಿಗಳಾದ ಹರೀಶ್, ಸುರೇಶ್, ಯಶವಂತ್, ಅನಿಲ್ ಕುಮಾರ್,ಕಂದಾಯ ಇಲಾಖೆಯ ತೇಜಸ್, ಅಸ್ಗರ್ ಪಾಷ ಕಾರ್ಯಾಚರಣೆಯಲ್ಲಿ ಭಾಗಿವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ