Sunday, May 5, 2024

ಪ್ರಾಯೋಗಿಕ ಆವೃತ್ತಿ

ಮಾರಾಟವಾಗಿದ್ದ ಹಸುವನ್ನು ಬಿಟ್ಟಿರಲಾರದೇ ಹಿಂಬಾಲಿಸಿದ ಸಹಪಾಠಿ ಗೂಳಿ: ವಿಡಿಯೋ ವೈರಲ್ !

ಪ್ರತಿ ಪ್ರಾಣಿಗಳಿಗೂ ಜೀವದ ಜೊತೆಗೆ ಮನುಷ್ಯರಂತೆ ಸ್ನೇಹ, ಪ್ರೀತಿ, ಬಾಂದವ್ಯದ ಭಾವನೆಗಳುಂಟು!! ಎಂಬುದು ಜಾನುವಾರುಗಳ ವಿಷಯದಲ್ಲೂ ಸಾಬೀತಾಗಿದೆ.

ತಮಿಳುನಾಡಿನಲ್ಲಿ ರೈತನೊಬ್ಬ ತನ್ನಲ್ಲಿನ‌ ಹಸುವೊಂದನ್ನು ಮತ್ತೊಬ್ಬ ರೈತನಿಗೆ ಮಾರಾಟ ಮಾಡಿದ್ದ. ಹಸುವನ್ನು ಕೊಂಡುಕೊಂಡ ರೈತ ಆ ಹಸುವನ್ನು ಗೂಡ್ಸ್ ಆಟೋದ ಮೂಲಕ ಕೊಂಡೊಯ್ಯುತ್ತಿದ್ದ, ಹೀಗೆ ತೆರೆದ ಗೂಡ್ಸ್ ಆಟೋದಲ್ಲಿ ಹಸುವನ್ನು ಕೊಂಡೊಯ್ಯುವಾಗ ಹಸುವಿನ ದೀರ್ಘಕಾಲದ ಸಹಪಾಠಿ ಗೂಳಿಯೊಂದು ಕ್ಯಾಂಟರ್ ವಾಹನವನ್ನು ಹಿಂಬಾಲಿಸಿ, ಹಸುವನ್ನು ಕರೆದುಕೊಂಡು ಹೋಗಿ ನನ್ನಿಂದ ಅದನ್ನು ದೂರಮಾಡಬೇಡಿ ಎಂದು ಬೇಡಿಕೊಳ್ಳುವಂತೆ ವರ್ತಿಸಿ, ಅದರ ಹಿಂದೆ ಓಡಿ ಹೋಯಿತು.

“>

ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿ‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸ್ಥಳೀಯರು ಹಸು ಮತ್ತು ಗೂಳಿಯನ್ನು ಒಂದು ಮಾಡಲು ಮುಂದಾದರು. ಹಸುವನ್ನು ಕೊಂಡುಕೊಂಡಿದ್ದ ವ್ಯಕ್ತಿಯೊಂದಿಗೆ ಮಾತನ್ನಾಡಿದ ಜನತೆ ಹಸು ಮತ್ತು ಗೂಳಿಯನ್ನು ಒಂದೇ ಕಡೆ ಇರುವಂತೆ ವ್ಯವಸ್ಥೆ ಮಾಡಿದರು.

ಕೃಪೆ: ಪರಿಸರ ಪರಿವಾರ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!