Friday, November 20, 2026

ಪ್ರಾಯೋಗಿಕ ಆವೃತ್ತಿ

ಕೇಂದ್ರ – ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಏಜೆಂಟ್ : ಭರತ್ ರಾಜ್

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹೆಸರಿಗೆ ಮಾತ್ರ ಜನಸಾಮಾನ್ಯರ ಪ್ರತಿನಿಧಿಗಳಾಗಿದ್ದಾರೆ, ಆದರೆ ಉದ್ಯಮಪತಿಗಳ ಏಜೆಂಟರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್ ಎಲ್ ಭರತ್ ರಾಜ್ ಆರೋಪಿಸಿದರು.

ದೇವನಹಳ್ಳಿ ತಾಲ್ಲೂಕಿನ ಹದಿಮೂರು ಹಳ್ಳಿಗಳ ರೈತರ ಕೃಷಿ ಭೂಮಿಯನ್ನ 1777 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಅಲ್ಲಿಗೆ ತೆರಳಲು ಮಳವಳ್ಳಿಯಲ್ಲಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ದೇಶದ ಅಭಿವೃದ್ಧಿ ಎಂದರೆ ಕೈಗಾರಿಕೆಗಳು ಎಂದು ಮಾತ್ರ ಭಾವಿಸಿದಂತಿದೆ ಕೈಗಾರಿಕೋದ್ಯಮಿಗಳಿಗೆ 90 ಪೈಸೆಗೆ ಒಂದು ಎಕರೆ ಭೂಮಿಯನ್ನು ನೀಡಬೇಕೆಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಾತನಾಡುತ್ತಾರೆ, ಆದರೆ ತಲೆತಲಾಂತರಗಳಿಂದ ವ್ಯವಸಾಯ ಮಾಡಿಕೊಂಡು ತಾವು ಅನ್ನ ತಿಂದು ಇತರರಿಗೆ ಅನ್ನ ಹಾಕುವುದರ ಮುಖಾಂತರ ಈ ದೇಶದ ಆಹಾರ ಭದ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವ ರೈತರಿಗೆ ಉಳುವವನಿಗೆ ಭೂಮಿ ನೀಡುವ ಬದಲಾಗಿ ಉಳ್ಳವರಿಗೆ ಪುಕ್ಕಟೆಯಾಗಿ ಭೂಮಿ ನೀಡಲು ಹೊರಟಿದ್ದಾರೆ. ಉಳ್ಳವರಿಗಾಗಿ ಭೂ ಬ್ಯಾಂಕ್ ಎಂದು ನಿರ್ಮಿಸಿ ಐದು ಲಕ್ಷ ಎಕರೆಗೂ ಹೆಚ್ಚಾಗಿ ಭೂಮಿಯನ್ನ ಮೀಸಲಿಟ್ಟಿದ್ದಾರೆ, ಬಡವರಿಗೆ ನಿವೇಶನವಿಲ್ಲ ವಸತಿ ಇಲ್ಲ ಉದ್ಯೋಗ ಸೃಷ್ಟಿಯ ಮಾತೆಂತೂ ಇಲ್ಲವೇ ಇಲ್ಲ ಉದ್ಯಮಪತಿಗಳಿಗೆ ಶೇ.3೦ರಷ್ಟು ಸಬ್ಸಿಡಿ ನೀಡುತ್ತಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಶಿವಕುಮಾರ್, ಪ್ರಮೀಳಾ, ಪ್ರಕಾಶ್ ಎಂಇ, ಮಹದೇವ್, ಚಿಕ್ಕಸ್ವಾಮಿ, ಪರಿಮಳ, ಗಣೇಶ್, ಜಯೇಂದ್ರ. ಮತ್ತುರಾಜ್ ನಂಜುಂಡಸ್ವಾಮಿ, ಆಂತೋನಿ, ನಾಗಮ್ಮ, ಶಿವಸ್ವಾಮಿ ಮುಂತಾದವರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ