ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ಆಡಳಿತ ಮಂಡಳಿ ನೂತನ ಉಪಾಧ್ಯಕ್ಷರಾಗಿ ಟಿ.ಬಿ.ಚೈತ್ರಬೋರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಡ್ಯ ನೆಹರು ನಗರದ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ಕಚೇರಿಯಲ್ಲಿ ನಡೆದ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಒಮ್ಮತದಿಂದ ಚುನಾವಣೆ ನಡೆಸಿ, ಉಪಾಧ್ಯಕ್ಷರನ್ನು ಆಯ್ಕೆಮಾಡಿಕೊಂಡರು.
ಬಳಿಕ ಮಾತನಾಡಿದ ಅಧ್ಯಕ್ಷ ಬೇಲೂರು ಸೋಮಶೇಖರ್, ಇಂದು ಕೆ.ವಿ.ಶಂಕರಗೌಡ ಅವರ ಜನ್ಮದಿನವಾಗಿದೆ, ಅವರ ಕೊಡುಗೆ ಮತ್ತು ಸಹಕಾರ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಯನ್ನು ಸ್ಮರಿಸಿಕೊಳ್ಳುತ್ತೇವೆ, ತ್ಯಾಗ ಮತ್ತು ಪ್ರಾಮಾಣಿಕ ಸೇವೆಗೆ ನಿತ್ಯಸಚಿವರು ಮಾರ್ಗದರ್ಶಕರಾಗಿದ್ದಾರೆ ಎಂದು ಸ್ಮರಿಸಿದರು.
ಇಂದು ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಒಟ್ಟು 16ಮಂದಿ ನಿರ್ದೇಶಕರಿದ್ದು, ಎಲ್ಲರ ಸಹಕಾರದೊಂದಿಗೆ ಮಹಿಳೆಯರನ್ನು ಸಹಕಾರ ಕ್ಷೇತ್ರದಲ್ಲಿ ಪ್ರೋತ್ಸಹಿಸುವ ನಿಟ್ಟಿನಲ್ಲಿ ಪ್ರಥಮಬಾರಿಗೆ ಉಪಾಧ್ಯಕ್ಷರನ್ನಾಗಿ ನಿರ್ದೇಶಕರಾದ ಟಿ.ಬಿ.ಚೈತ್ರಬೋರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ನೂತನ ಉಪಾಧ್ಯಕ್ಷೆ ಟಿ.ಬಿ.ಚೈತ್ರ, ಎಲ್ಲರ ಸಹಕಾರದೊಂದಿಗೆ ಆಡಳಿತ ಮಂಡಳಿಯನ್ನು ಮತ್ತಷ್ಟು ಅಭಿವೃದ್ದಿಗೆ ಕೊಂಡಯ್ಯಲಾಗುವುದು, ಸಹಕಾರ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ನಾಗೇಂದ್ರ, ಗುರುಸ್ವಾಮಿ, ಬಿ.ಡಿ.ಪುರುಷೋತ್ತಮ್, ಎನ್.ಬಿ.ಕುಮಾರ್, ಎ.ಆರ್.ರಾಜನಾಯಕ, ಶಶಿಧರ್ಸಂಗಾಪುರ, ಸುಗ್ಗಿ ಕೆಂಚಪ್ಪ, ಎಂ.ಡಿ.ಪ್ರಕಾಶ್, ಸಿ.ದೇವರಾಜು, ಎನ್.ದಾಸೇಗೌಡ, ಕೆ.ಜೆ.ದೇವರಾಜು, ಆರ್.ಕೆ.ಶ್ರೀಮತಿ, ಕೊಂಡಯ್ಯ, ಎಚ್.ಎಸ್.ನಂದೀಶ್, ಎಚ್.ಎಸ್.ದೀಪಕ್, ಬಿ.ವಿ.ಹರೀಶ್, ಕೆ.ಜಿ.ಮೋಹನ್ ಮತ್ತು ಸಿಬ್ಬಂದಿಗಳು ಹಾಜರಿದ್ದರು




