Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ದಲಿತ ಪರ ರಾಜಕಾರಣಿ : ನಾಗರಾಜು

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ದಲಿತ, ಹಿಂದುಳಿದ, ಶೋಷಿತರ ಪರವಾಗಿ ಎನ್.ಚಲುವರಾಯಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನು ಕೆಲವು ರಾಜಕೀಯ ವಿರೋಧಿಗಳು ದಲಿತ ವಿರೋಧಿ ಎಂದು ಬಿಂಬಿಸುತ್ತಿರುವುದು ಖಂಡನೀಯ ಎಂದು ದಲಿತ ಮುಖಂಡ ಹೊನ್ನಾವರ ನಾಗರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ವಿರುದ್ಧವಾಗಿ ಜೆಡಿಎಸ್ ಶಾಸಕ ಸುರೇಶ್ ಗೌಡ ಅಪಪ್ರಚಾರ ನಡೆಸುತ್ತಿದ್ದು, ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಜೆಡಿಎಸ್ ಮುಖಂಡರು ಚಲುವರಾಯಸ್ವಾಮಿ ಅವರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ, ಇವು ಸತ್ಯಕ್ಕೆ ದೂರವಾದ ವಿಚಾರಗಳಾಗಿವೆ. ದಲಿತ ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎನ್ನುವ ಸುಳ್ಳುಗಳಿಂದ ಕೂಡಿದ ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ. ಇದು ಸುರೇಶ್ ಗೌಡರ ರಾಜಕೀಯ  ಪ್ರೇರಿತವಾಗಿದೆ ಎಂದು ದೂರಿದರು.

ನಾಗಮಂಗಲ ಕ್ಷೇತ್ರದಲ್ಲಿ ಒಕ್ಕಲಿಗರು, ದಲಿತ ಸಮುದಾಯಗಳು, ಅನ್ಯೋನ್ಯವಾಗಿ ಬದುಕುತ್ತಿದ್ದು, ರಾಜಕೀಯವಾಗಿ ಪರಸ್ಪರ ಒಳಗೊಂಡು ಮುನ್ನಡೆಯುತ್ತಿವೆ. ಆದರೆ ಈ ಸಮುದಾಯಗಳ ನಡುವೆ ಒಡಕು ತಂದು, ಜಾತಿ ಸಂಘರ್ಷ ವಾತಾವರಣ ನಿರ್ಮಿಸಲು ಜೆಡಿಎಸ್ ಅಭ್ಯರ್ಥಿ ಸುರೇಶ್‌ ಗೌಡ ಷಡ್ಯಂತ್ರ ನಡೆಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಚಲುವರಾಯಸ್ವಾಮಿ ಅವರ ವಿರುದ್ಧ ದಲಿತ ಸಮುದಾಯವನ್ನು ಪ್ರಚೋದಿಸುವ ಹುನ್ನಾರ ನಡೆಸಿದ್ದು,ಜಿಲ್ಲಾ ಚುನಾವಣಾಧಿಕಾರಿಗಳು ಈ ಕರಪತ್ರ ಹಂಚದಂತೆ ತಡೆಯಬೇಕು. ಇದಕ್ಕೆ ಕಾರಣರಾದವರ ಮೇಲೆ‌ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ದಲಿತ  ಮುಖಂಡರಾದ ಭೀಮನಹಳ್ಳಿ ನಾಗರಾಜು, ಶಿವಣ್ಣ, ಎಂ.ನಾಗರಾಜಯ್ಯ, ರಮಾನಂದ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ