ಪಾಂಡವಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಚಂದ್ರಶೇಖರಯ್ಯ ಅವರನ್ನು ತಾಲ್ಲೂಕು ಜಾ.ದಳ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತ್ತು.
ತಾಲ್ಲೂಕು ಜಾ.ದಳ ಅಧ್ಯಕ್ಷರಾದ ಎಸ್.ಎ.ಮಲ್ಲೇಶ್ ಅವರ ನೇತೃತ್ವದಲ್ಲಿ ಚಂದ್ರಶೇಖರಯ್ಯ ಅವರ ನಿವಾಸದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಸನ್ಮಾನಿಸಿ ಮಾತನಾಡಿದರು. ಹಿರಿಯ ಸಾಹಿತಿ ನಿವೃತಿ ಮುಖ್ಯೋಪಾದ್ಯಾಯರಾಗಿ ಹಲವು ಕನ್ನಡ ಸಂಘಟನೆಯಲ್ಲಿ ಸೇವೆ ಸಲ್ಲಸಿ ಹೆಸರುಗಳಿಸಿರುವ, ಸರಳ ಸಜ್ಜನಿಕೆ ಉತ್ತಮ ವ್ಯಕ್ತಿತ್ವದ ಚಂದ್ರಶೇಖರಯ್ಯ ಅವರ ಸೇವೆ ಪರಿಗಣಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು 9ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಅಯ್ಕೆ ಮಾಡಿರುವುದು ಶ್ಲಾಘನಿಯ ಎಂದು ಸಂತಸ ವ್ಯಕ್ತಪಡಿಸಿದರು.
ಇವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಲಭಿಸಿದೆ. ಜಿಲ್ಲಾ ಕನ್ನಡ ರಾಜ್ಯೋತ್ಸಾವ ಪ್ರಶಸ್ತಿ, ಶಿಕ್ಷಣ ಇಲಾಖೆಯಿಂದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಕುವೆಂಪು ಕಲಾ ಬಳಗ ಚುಟುಕು ರತ್ನ ಪ್ರಶಸ್ತಿ, ಕರ್ನಾಟಕ ಕಾವಲು ಪಡೆ ವತಿಯಿಂದ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಕೃಷಿಕ್ ಲಯನ್ಸ್ ಸಂಸ್ಥೆ ಮಂಡ್ಯ ವತಿಯಿಂದ ಹಾಸ್ಯ ಚಕ್ರವರ್ತಿ ಪ್ರಶಸ್ತಿ, ಇನ್ನು ಅನೇಕ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಸರಳ ಸಜ್ಜನಿಕೆ ಚಂದ್ರಶೇಖರಯ್ಯ ಅವರಿಗೆ ಇನ್ನು ಹೆಚ್ಚಿನ ರೀತಿ ಗೌರವಸಿಗಲಿ. ಮಂದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಅಯ್ಕೆ ಅಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಎಲ್.ನಂಜೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷರಾದ ಕೆ.ವೈರಮುಡೀಗೌಡ, ಡಿಂಕಾ ಮಹದೇವಪ್ಪ, ಮುಖ್ಯ ಶಿಕ್ಷಕರಾದ ಮಹದೇವಪ್ಪ, ಶಿಕ್ಷಕ ಸದಾಶಿವ, ಬೇಬಿಹರೀಶ್, ಜಿಲ್ಲಾ ವೀರಶೈವ ಮಹಾಸಭಾ ಕಾರ್ಯದರ್ಶಿ ಎಂ.ಶಿವಕುಮಾರ್, ಪುರಸಭ ಸದಸ್ಯರಾದ ಎಂ.ಗಿರೀಶ್, ಕೆ.ವೈ.ಬಾಬು, ಕೆ.ವೈ.ಸುರೇಶ್, ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಬಿ.ಎಸ್.ಜಯರಾಮು, ಉಪಸ್ಥಿತರಿದರು.




