Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಾವಿಗೆ ಬಿಸಾಕಿ ಹೋಗಿದ್ದ ಮಗುವಿನ ರಕ್ಷಣೆಗೆ ಮುಂದಾದ ಚಂದ್ರೆ ಗ್ರಾಮಸ್ಥರು

ಗಂಡುಮಗುವನ್ನು ಬಾವಿಗೆ ಬಿಸಾಡಿರುವ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.

ಚಂದ್ರೆ ಗ್ರಾಮದ ಹೊರವಲಯದಲ್ಲಿರುವ ಪಾಳು ಬಾವಿಗೆ ಆಗತಾನೆ ಹುಟ್ಟಿದ್ದ ಮಗುವನ್ನು ಪಾಪಿಗಳು ಬಿಸಾಡಿ ಹೋಗಿದ್ದಾರೆ. ಸ್ಥಳೀಯರಾದ ಮದನ್ ಹಾಗು ಪತ್ನಿ ಕುಮಾರಿ ಎಂಬುವರು ತಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ಮಗು ಕಿರುಚಾಡುವ ಶಬ್ಧ ಕೇಳಿದಾಗ ತಕ್ಷಣ ಹೋಗಿ ನೋಡಿದ್ದಾರೆ.

ನೋಡಿದ ಕೂಡಲೇ ಆತಂಕಗೊಂಡ ಕುಮಾರಿಯವರು ಕೂಗಾಡಿ ಅಕ್ಕಪಕ್ಕದಲ್ಲಿದ್ದ ಗ್ರಾಮದ ಜನರನ್ನು ಕರೆದಿದ್ದಾರೆ. ಕೂಡಲೇ ಸ್ಥಳೀಯರಾದ ಮರಿದೇವೇಗೌಡ ಎಂಬವರು ಬಾವಿಗೆ ಇಳಿದು ಮಗುವನ್ನು ಮೇಲೆತ್ತಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆತಂದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಸರಿಯಾದ ಸಮಯಕ್ಕೆ ವಿಷಯ ತಿಳಿದು ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದ್ದಿಗಳು ಮಗುವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಮಗುವನ್ನು ವಿಕಸನ ಸಂಸ್ಥೆಯ ಜೋಗುಳ ಕೇಂದ್ರದ ಎಂ ಜೆ ಪ್ರಸನ್ನ ರವರ ವಶಕ್ಕೆ ನೀಡಿದ್ದಾರೆ.

ಈ ಘಟನೆಯ ಕುರಿತೆ ಪಾಂಡವಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ವೈದ್ಯರು ಮಗುವು ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ