Monday, October 28, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಕೋಡಿ ಬಿದ್ದ ಚೌಡೇನಹಳ್ಳಿ ಕೆರೆ ; ಗ್ರಾಮದ ಸಂಪರ್ಕಕ್ಕೆ ಜನರ ಪರದಾಟ

ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಕೆರೆಯು ನಿರಂತರ ಮಳೆಯಿಂದಾಗಿ ಕೋಡಿ ಬಿದ್ದು ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸಿದ್ದ ರಸ್ತೆ ಜಲಾವೃತವಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ಈ ಸಂಬಂಧಪಟ್ಟ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಚೌಡೇನಹಳ್ಳಿ ಗ್ರಾಮದಸ್ಥರು ಕಿಡಿಕಾರಿದ್ಧಾರೆ. ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಗ್ರಾಮಸ್ಥರ ಜೊತೆಗೂಡಿ ತಾಲ್ಲೂಕು ಮುಖ್ಯ ಕಚೇರಿ ಎದುರು ಧರಣಿ ನೆಡಸುವಾದಾಗಿ ಸ್ಥಳೀಯ ಮುಖಂಡರು ಎಚ್ಚರಿಸಿದ್ದಾರೆ.

ಕಿಕೇರಿ ಹೇಮಾವತಿ ವಿಭಾಗದ ಎಇಇ ಚಂದ್ರೆಗೌಡ ಮಾತನಾಡಿ, ಮಳೆಗಾಲದಲ್ಲಿ ಕೆರೆ ಕಟ್ಟೆ ಹಳ ಕೊಳ್ಳ ತುಂಬಿ ಹರಿಯುವುದು ಸಹಜ. ಚೌಡೇನಹಳ್ಳಿ ರಸ್ತೆ ಕೆರೆ ಕೊಡಿ ಪಕ್ಕಾದಲ್ಲಿ ಇದು ರಸ್ತೆ ತುಂಬಾ ತಗ್ಗು ಪ್ರದೇಶಕ್ಕೆ ಹೊಂದಿಕೊಂಡಿದೆ, ರಸ್ತೆಯನ್ನು ಎತ್ತರಿಸಿದರೆ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಸಾಧ್ಯ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!