Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ದರ್ಶನ್ ಗೌಡಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ

ಮದ್ದೂರು ತಾಲ್ಲೂಕು ಛಾಯಾ ಕ್ಷೇಮಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ದರ್ಶನ್ ಗೌಡ ಅವರಿಗೆ ಫೋಟೋ ಟುಡೇ 20ನೇ ವರ್ಷದ ಸಂಭ್ರಮದಾಚರಣೆಯ ಅಂಗವಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದರ್ಶನ್ ಗೌಡ ಅವರು ಕಳೆದ 28 ವರ್ಷಗಳಿಂದ ವೃತ್ತಪರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ, ಅಲ್ಲದೇ 2 ವರ್ಷಗಳ ಕಾಲ ಮದ್ದೂರು ತಾಲ್ಲೂಕು ಛಾಯಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ, ಅವರ ಈ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ಆರ್.ಗುರುರಾಘವ, ಉಪಾಧ್ಯಕ್ಷ ಸಿ. ರಾಜಶೇಖರಮೂರ್ತಿ, ಖಜಾಂಚಿ ಎಂ.ಎಸ್.ನಟೇಶ್, ಕಾರ್ಯದರ್ಶಿ ಎಂ.ಆರ್.ರಾಜೇಶ್ ಹಾಗೂ ನಿರ್ದೇಶಕರಾದ ಹೆಚ್.ಆರ್.ಅನಿಲ್ ಕುಮಾರ್, ಎಂ.ಸಿ. ಶಶಿಗೌಡ ಸದಸ್ಯರಾದ ಸುರೇಶ್, ಸಂಜು, ಮಹೇಶ್, ಶಂಕರ್ ಮತ್ತು ಅನೇಕ ಛಾಯಾ ಮಿತ್ರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ