ಬಿ.ಪೀರ್ ಭಾಷಾ, ಸಾಹಿತಿ
ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಬಾಡೂಟ ತಿನ್ನಬೇಕೆಂದೇನು ಬರುವುದಿಲ್ಲ. ಬಾಡೂಟ ಬೇಕೆಂದು ಈ ಮೊದಲೇನು ಕೇಳಿರಲಿಲ್ಲ. ಆದರೆ ಅನಗತ್ಯವಾಗಿ, ಮೇಲರಿಮಯ ರೋಗದಿಂದ, ಹೆಚ್ಚುಗಾರಿಕೆ ತೋರಿಸುವ ಧಿಮಾಕಿನಿಂದ ಯಾವಾಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ “ಮಾಂಸಾಹಾರ ನಿಷೇಧ” ದ ಮಾತಾಡಿದರೋ ಆಗಿನಿಂದ ಈ ನಿಷೇಧಿ ನಿಲುವನ್ನು ಪ್ರಶ್ನಿಸಿ, ಪ್ರತಿಭಟನಾರ್ಥವಾಗಿ ಬಾಡೂಟದ ಬೇಡಿಕೆ ಮುಂಚೂಣಿಗೆ ಬಂದಿತು ಎಂಬುದನ್ನು ಗಮನಿಸಬೇಕು.
ಸಮಸ್ಯೆಯ ಮೂಲ ಇರುವುದು, ತಪ್ಪಾಗಿರುವುದು “ಮಾಂಸಾಹಾರ ನಿಷೇಧ” ದ ಮಾತಾಡಿರುವ ಅಧಿಕಪ್ರಸಂಗದಲ್ಲಿ, ಉಪದ್ವಾಪೀತನದಲ್ಲಿ. ಹಾಗಾಗಿ ಮೊದಲು ಆತನ ಅಥವಾ ಅಂತಹ ಮನಸ್ಥಿತಿ ನೆಟ್ಟಗಾಗಬೇಕು.
ಬಾಡೂಟ ತಿನ್ನುವವರು ನಮ್ಮನಮ್ಮ ಮನೆಗಳಲ್ಲಿ ಕೆಜಿಗಟ್ಟಲೆ ತಂದು ತಿಂತೇವೆ. ಸಮ್ಮೇಳನಕ್ಕೇ ಬಂದೇ ತಿನ್ನಬೇಕು, ಅಥವಾ ತಿನ್ನಲೆಂದೇ ಸಮ್ಮೇಳನಕ್ಕೆ ಬರುವವರು ಅಂತಲ್ಲ. ಹೆಚ್ವುಜನ ತಿನ್ನುವ ಮಾಂಸಾನ್ನ ಕೀಳುಗಳೆದು ನಿಷೇಧ ಎಂದಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿ. ಇಲ್ಲವೇ ವಡೆ ಹಂಚಿದಂತೆ ಬಯಸಿದವರಿಗೆ ಎರಡೆರಡು ಪೀಸು ಚಿಕನ್ ಕಬಾಬ್ ವಿತರಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.





ಸಾಹಿತ್ಯ ಸಮ್ಮೇಳನದ ಸಾಹಿತ್ಯಾಭಿಮಾನಿಗಳಿಗೆ ಇದುವರೆಗೂ ಸಸ್ಯಾಹಾರ ಭೂರೀ ಭೋಜನ ವ್ಯವಸ್ಥೆ ಮಾತ್ರ ಇರುತ್ತಿತ್ತು; ಆದರೆ ಈಗ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ; ಮುಂದೆ ಏನೇನು ಆಗುತ್ತದೆಯೋ ಯಾರು ಬಲ್ಲರು!
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]