Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಗ್ರಾ.ಪಂ ಅಧ್ಯಕ್ಷರಾಗಿ ಚಿಕ್ಕಣ್ಣೇಗೌಡ ಆಯ್ಕೆ

ಮಳವಳ್ಳಿ ತಾಲ್ಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕಣ್ಣೇಗೌಡ, ಉಪಾಧ್ಯಕ್ಷರಾಗಿ ನಾಗಮ್ಮ ಆಯ್ಕೆಯಾದರು.

ಗ್ರಾಮಪಂಚಾಯಿತಿಯ 14 ಸದಸ್ಯ ಬಲದಲ್ಲಿ 13 ಸದಸ್ಯರು ಹಾಜರಿದ್ದರು. ಒಬ್ಬ ಸದಸ್ಯೆ ರಾಜೇಶ್ವರಿ ಗೈರು ಹಾಜರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಣ್ಣೇಗೌಡ ಹಾಗೂ ನಂಜುಂಡೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಸಾಕಮ್ಮ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಚಂದ್ರಪಾಟೀಲ್ ನೇತೃತ್ವದಲ್ಲಿ ನಡೆದ ಗೌಪ್ಯ ಮತದಾನದಲ್ಲಿ ಚಿಕ್ಕಣ್ಣೇಗೌಡ 8 ಮತ ಪಡೆದು ಜಯಶೀಲರಾದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾಗಮ್ಮ 8 ಮತಗಳನ್ನು ಪಡೆದು ಜಯಶೀಲರಾದರು.

ಜಾಹೀರಾತು

ಅಧ್ಯಕ್ಷರಾಗಿ ಚಿಕ್ಕಣ್ಣೇಗೌಡ ಉಪಾಧ್ಯಕ್ಷರಾಗಿ ನಾಗಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಚಂದ್ರಪಾಟೀಲ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ಅಭಿನಂದನೆ ಸಲ್ಲಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ