Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಉದ್ಯೋಗ ಸೃಷ್ಟಿಸುವ ಪರಂಪರೆ ಬೆಳೆಯಲಿ: ಚಿರಂಜೀವಿ ಸಿಂಗ್

ಶಿಕ್ಷಣ ಕ್ಷೇತ್ರದಲ್ಲಿ ಮಂಡ್ಯ ಬಹಳ ಮುಂದೆ ಬಂದಿದೆ. ಇದರಲ್ಲಿ ಶ್ರೀಮಠದ ಪಾತ್ರ ಮಹತ್ವದ್ದು. ಆರೋಗ್ಯ ಮತ್ತು ಶಿಕ್ಷಣ ಎರಡು ವಲಯದಲ್ಲಿ ಹೆಚ್ಚಿನ ಕೆಲಸ ಆದರೆ ತುಂಬಾ ಸಂತೋಷ. ತಿಮ್ಮೇಗೌಡ ಅವರಿಗೆ ಮಂಗಲದ ಕೆಂಪಮ್ಮ ಸ್ಫೂರ್ತಿ ಅಂತ ಅವರು ಹೇಳ್ತಾ ಇದ್ರು, ಮಂಡ್ಯದ ಜನ ವಲಸೆಗಾಗಿ ಬೆಂಗಳೂರಿಗೆ ಹೋಗಿ ಸ್ಲಂನಲ್ಲಿ ಕಡಿಮೆ ಆದಾಯಕ್ಕೆ ಕೆಲಸ ಮಾಡ್ತಾ ಇದ್ದಾರೆ. ಇಲ್ಲೇ ಏನಾದ್ರೂ ಉದ್ಯೋಗ ಮಾಡಬೇಕು. ವಲಸೆ ಹೋಗದಂತೆ ತಡೆಯಬೇಕೆಂದು ವಿಶ್ರಾಂತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.

ಮಂಡ್ಯನಗರದ ರೈತ ಸಭಾಂಗಣದಲ್ಲಿ ಟಿ.ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ನಡೆದ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಉದ್ಘಾಟನೆ, ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ,ಶ್ರೀಮತಿ ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿಕ ಪ್ರಶಸ್ತಿ ಹಾಗೂ ಎಮ್.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ವಿ.ಶಕರಗೌಡರನ್ನು ನೆನೆದ ಚಿರಂಜೀವಿಸಿಂಗ್

ಮಂಡ್ಯ ಜಿಲ್ಲೆಯಲ್ಲಿ 1977-78 ರಲ್ಲಿ ವರುಣಾ ಚಳುವಳಿ ನಡೆದಾಗ ಜನಕ್ಕೆ ನಾಯಕತ್ವ ಇರಲಿಲ್ಲ. ವಿದ್ಯಾರ್ಥಿಗಳ ಮೂಲಕ ಚಳುವಳಿ ನಡೆಯುತ್ತಿತ್ತು. ಚಳುವಳಿ ಹಿಂಸಾರೂಪ ತಳೆಯಬಹುದು ಎಂಬ ಆತಂಕ ಇತ್ತು.ಆ ಕಾರಣದಿಂದ ಇಲ್ಲಿನ ನಾಯಕ ಕೆ.ವಿ.ಶಂಕರಗೌಡರನ್ನು ಚಳುವಳಿ ನೇತೃತ್ವ ವಹಿಸಲು ಕೇಳಿದಾಗ ಕಷ್ಟದ ಕೆಲಸವಾದರೂ ಒಪ್ಪಿಕೊಂಡರು. ಇದು ಅವರ ದೊಡ್ಡ ಗುಣ. ಮೂರು ತಿಂಗಳುಗಳ ಕಾಲ ಅವರ ನೇತೃತ್ವದಲ್ಲಿ ನಡೆದ ದೊಡ್ಡ ಚಳುವಳಿ ಅಹಿಂಸಾತ್ಮಕವಾಗಿ ನಡೆದದ್ದು ಐತಿಹಾಸಿಕ ಎಂದು ನೆನಪಿಸಿಕೊಂಡರು. ಏಕೀಕರಣದ ಚಳುವಳಿ ನಡೆದ ನಂತರ ಇಂತಹ ಚಳುವಳಿ ನಡೆದಿರಲಿಲ್ಲ. ಇದರ ಶ್ರೇಯಸ್ಸಿಗೆ ಕೆ.ವಿ.ಶಂಕರಗೌಡರು ಕಾರಣ ಎಂದು ನೆನಪಿಸಿಕೊಂಡರು. ಅವರು ತೋರಿದ ಹಾದಿಯಲ್ಲಿ ತಿಮ್ಮೇಗೌಡರು ಪ್ರತಿಷ್ಠಾನವನ್ನು ನಡೆಸಲಿ ಎಂದು ಹಾರೈಸಿದರು.

ತಿಮ್ಮೇಗೌಡರು ಅದೇ ದಿಕ್ಕಿನಲ್ಲಿ ಕೆಲಸ ಮಾಡುವುದು ಬಾಕಿ ಇದೆ.ಹಿಂದೆ ಶಿಕ್ಷಣದಲಲಿ ಮಂಡ್ಯ ಕೊನೆಯ ಸ್ಥಾನದಲ್ಲಿತ್ತು. ಜಿಲ್ಲೆಯಲ್ಲಿ ಚೌಡಯ್ಯ, ಜಿ.ಮಾದೇಗೌಡ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಶ್ರೀ ಕ್ಷೇತ್ರದ ಯೋಗದಾನದ ಕೊಡುಗೆ ಇದೆ. ಉದ್ಯೋಗ ಸೃಷ್ಟಿಸುವ ಪರಂಪರೆ ಬೆಳೆಯಬೇಕು. ಫಲವತ್ತಾದ ಈ ಸುಂದರವಾದ ಪರಿಸರದಿಂದ ವಲಸೆ ಹೋಗಬಾರದು. ಈ ನೆಲದಿಂದ ಸಿಕ್ಕಿದ ಯಶಸ್ಸನ್ನು ಪ್ರತಿಷ್ಠಾನದ ಮೂಲಕ ಕೊಡುಗೆ ನೀಡಿ ಜನಸೇವೆ ಸಲ್ಲಿಸಲಿ ಎಂದರು.

ಮಂಡ್ಯಕ್ಕೂ ನನಗೂ ಆತ್ಮೀಯ ಸಂಬಂಧವಿದೆ. ಮಹಾ ಗುರುಪರಂಪರೆಯನ್ನು ಹೊಂದಿರುವವರು ಚುಂಚನಗಿರಿ ಸ್ವಾಮೀಜಿಯವರು. ಇದು ನನಗೆ ದೊಡ್ಡ ಸ್ಫೂರ್ತಿ. ಮಂಡ್ಯ ಪ್ರತಿಭೆಯ ಆಗರ. ಗೋವಿನ ಹಾಡು ಬರೆದ ಕವಿ ಮಂಡ್ಯ ಜಿಲ್ಲೆಯವರು. ಮಂಡ್ಯ ಜಿಲ್ಲೆಯ ಪರಂಪರೆಯ ಸಮೃದ್ಧವಾದದ್ದು ಎಂದರು.

ಈ ನೆಲದ ಸಮೃದ್ಧ ಪರಂಪರೆಯಿಂದ ತಿಮ್ಮೇಗೌಡರಿಗೆ ಮತ್ತು ಇಲ್ಲಿನ ಪ್ರತಿಭಾವಂತರಿಗೆ ಆ ಯಶಸ್ಸು ಈ ಮಣ್ಣಿನಿಂದ ಜಿಲ್ಲೆಯಿಂದ ಸಿಕ್ಕಿದೆ. ಅದರಿಂದ ಈ ಭೂಮಿಗೆ, ನೆಲಕ್ಕೆ ಜನಕ್ಕೆ ವಾಪಸ್ ಪಡುವ ಭಾವನೆಯಿಂದ ಪ್ರತಿಷ್ಠಾನ ಸ್ಥಾಪನೆಯಾಗಿದೆ. ಅವರ ಜೀವನಕ್ಕೆ ಸಿಕ್ಕಿದ ಯಶಸ್ಸು ಈ ಪ್ರತಿಷ್ಠಾನಕ್ಕೂ ಯಶಸ್ಸು ಸಿಗಲಿ ಎಂದು ಆಶಿಸಿದರು.

ಜಲ ಸಾಕ್ಷರತೆ ಮೂಡಿಸುವ ಕೆಲಸವಾಗಲಿ

ಅಭಿನಂದನಾ ನುಡಿಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅತ್ಯಂತ ಆದರ್ಶ ಅಧಿಕಾರಿಯಾಗಿ, ಅವರ ಹೆಸರನ್ನು ಕೇಳಿದರೆ ಅವರಂತೆ ಆಗಬೇಕು ಎನ್ನುವ ಮನಸ್ಸು ಮೂಡಿಸುವ ವ್ಯಕ್ತಿತ್ವ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಾಹಿತ್ಯ ಪ್ರೇಮಿಯಾಗಿ ಮಂಡ್ಯದ ಆತ್ಮೀಯ ಮಗನಾಗಿ ಗುರುತಿಸಿಕೊಂಡ ಮಹಾನ್ ವ್ಯಕ್ತಿ ಚಿರಂಜೀವಿಸಿಂಗ್.ಅದೇ ರೀತಿ ನಿತ್ಯ ಸಚಿವ ಕೆ.ವಿ.ಶಂಕರಗೌಡರನ್ನು ನೆನದರೆ ಹೆಮ್ಮೆ ಮೂಡುತ್ತದೆ. ರೋಮಾಂಚನವಾಗುತ್ತಿದೆ ಎಂದರು.

ಟಿ. ತಿಮ್ಮೇಗೌಡ ಜನಮುಖಿ ಪ್ರಶಸ್ತಿ ಪಡೆದ ಲತಾ ಅವರು ಸಿಇಓ ಆಗಿ, ಡಿಸಿಯಾಗಿ ಯಶಸ್ಸಿನ ಕೆಲಸ ಮಾಡಿದ್ದಾರೆ. ಹಾಗೆ ಕೃಷಿಕ ಪ್ರಶಸ್ತಿ ಸ್ವೀಕರಿಸುತ್ತಿರುವ ಮಹೇಶ್ ಕುಮಾರ್ ಅವರು ಒಬ್ಬ ರೈತ ತಪಸ್ವಿಯಾಗಿದ್ದಾರೆ ಎಂದು ಅಭಿನಂದಿಸಿದರು. ನಮ್ಮ ಜಿಲ್ಲೆಯಲ್ಲಿ ವಿಶೇಷವಾಗಿ ತಿಮ್ಮೇಗೌಡರ ಹೆಸರಿನಲ್ಲಿ ಜಲ ಸಾಕ್ಷರತೆ ಉಂಟು ಮಾಡುವ ಉದ್ದೇಶ ಟ್ರಸ್ಟ್ ಇದೆ.ಅದೇ ರೀತಿ ಸಾವಯವ ಕ್ಷೇತ್ರ,ಆರೋಗ್ಯ, ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶವಿದೆ. ಸಾರ್ವಜನಿಕರು ಸಹಾಯ ಮಾಡಬೇಕು ಎಂದರು.

ಪ್ರಶಸ್ತಿ -ಪ್ರತಿಭಾ ಪುರಸ್ಕಾರ ಪ್ರದಾನ

ಕೃಷಿಕ ಪ್ರಶಸ್ತಿಯನ್ನು ಮಳವಳ್ಳಿ ತಾಲೂಕಿನ ಪ್ರಗತಿಪರ ರೈತ ಎಂ.ಎನ್.ಮಹೇಶ್‌ಕುಮಾರ್ ಅವರಿಗೆ ಶ್ರೀಮತಿ ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರಿಗೆ 25 ಸಾವಿರ ನಗದು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿ ಪುರಸ್ಕಾರವನ್ನು ಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್.ಎಂ. ಅನುಷಾ, ಸರ್ಕಾರಿ ಪ್ರೌಢಶಾಲೆಯ ಪ್ರಮೋದಿನಿ ಅವರಿಗೆ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಹೆಚ್.ಎಂ. ವೆಂಕಟಪ್ಪ ಪ್ರದಾನ ಮಾಡಿದರು. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ವಹಿಸಿದ್ದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಟ್ರಸ್ಟ್ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ, ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಮುನಿಯಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ದೇವರಾಜು, ಅರುಣ್ ಕುಮಾರ್, ಕೆ.ಜೆ.ಸುರೇಶ್ ಕೀಲಾರ , ಟಿ.ಶಂಕರೇಗೌಡ ,ಲಂಕೇಶ್ ಮಂಗಲ ಹಾಗೂ ಕಾರಸವಾಡಿ ಮಹದೇವು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ