ವರದಿ : ನ.ಲಿ.ಕೃಷ್ಣ, ಕೃಷಿಕರು.
- ನರ್ಸರಿ ರಮೇಶ್ ಅವರ ಮನೆಯಲ್ಲಿ ನಡೆದ ಘಟನೆ
- ಸಿ ಸಿ ಕ್ಯಾಮರದಲ್ಲಿ ಕಂಡ ಚಿರತೆ
ಪಕ್ಷಿದಾಮ ಕೆ ಬೆಳ್ಳೂರಿನ ನರ್ಸರಿ ರಮೇಶ್ ಅವರ ಮನೆಗೆ ಇಂದು ಸೊಮವಾರ ನಸುಕಿನಲ್ಲಿ ಚಿರತೆ ದಾಳಿಮಾಡಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ.
ಮನೆ ಹೊರಂಡದಲ್ಲಿ ಶಬ್ದ ಕೇಳಿ ಎಚ್ಚರ ಗೊಂಡ ಮನೆಯವರು ಚಿರತೆ ತಮ್ಮ ಬಿಳಿಯ ಬಣ್ಣದ ಸಾಕು ನಾಯಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಕಂಡಿದ್ದಾರೆ
ನಂತರ ತಮ್ಮ ಮನೆಯ ಸಿ ಸಿ ಕ್ಯಾಮರದಲ್ಲಿ ಕೂಡ ಚಿರತೆ ನಾಯಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿರುವುದನ್ನ ಕಂಡು ಆತಂಕಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು ಗ್ರಾಮಸ್ಥರು ಭಯಗ್ರಸ್ಥರಾಗಿದ್ದಾರೆ.
ಕೆ ಬೆಳ್ಳೂರು ಗ್ರಾಮದ ಯುವ ಮುಖಂಡ ಮನೊಹರ್ ಅವರು ಮಾಧ್ಯಮದ ಜೊತೆ ಮಾತನಾಡಿ ಚಿರತೆ ಹಾವಳಿ ವ್ಯಾಪಕಗೊಳ್ಳುತ್ತಿದ್ದು ಗ್ರಾಮೀಣ ಪ್ರದೇಶದ ಜನ ಜಾನುವಾರುಗಳು ಆತಂಕದಲ್ಲಿ ಕಾಲದೂಡಬೇಕಾದ ಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ
ಬೇಸಿಗೆ ಕಾಲ ಬರುತ್ತಿದ್ದು, ಪಂಪ್ ಸೆಟ್ ಗಳಿಗೆ ರಾತ್ರಿಕಾಲ ವಿದ್ಯುತ್ ನೀಡುವ ಚೆಸ್ಕಾಂ ಅಧಿಕಾರಿಗಳು ಚಿರತೆ ಹಾವಳಿ ಗಮನಸಿ ಹಗಲಿನಲ್ಲಿ ವಿದ್ಯುತ್ ನೀಡಲು ಆಗ್ರಹಿಸಿದ್ದಾರೆ
ತಿಪ್ಪೂರು ಮನೋಹರ್ ಗೌಡ ಅವರು ಚಿರತೆ ಕೆ ಬೆಳ್ಳೂರು ತಿಪ್ಪೂರು ಸೇರಿದಂತೆ ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಚಿರತೆ ಕಂಡು ಬರುತ್ತಿದ್ದು ನಮ್ಮತೊಟದ ಮನೆಯಲ್ಲಿನ ಸಿ ಸಿ ಕ್ಯಾಮಾರದಲ್ಲೂ ಚಿರತೆ ಚಲನವಲನವನ್ನು ಹಲವು ಬಾರಿ ಸೆರೆಯಾಗಿದ್ದಾಗಿ ತಿಳಿಸಿದ್ದಾರೆ.
ಕೂಡಲೆ ಆರಣ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗಿ ಚಿರತೆ ಸೆರೆಹಿಡಿದು ಈ ಭಾಗದ ಜನರ ಆತಂಕವನ್ನು ದೂರಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ
ಹೀಗಾಗಲೆ ಕೂಳಗೆರೆಯಲ್ಲಿ ಎರಡು ಬೊನ್ ಚಿರತೆ ಸೆರೆ ಹಿಡಿಯಲು ಇಡಲಾಗಿದ್ದು ಕೆ ಬೆಳ್ಳೂರಿನಲ್ಲಿ ಚಿರತೆ ಕಂಡು ಬಂದಿರುವುದರಿಂದ ನಾಳೆ ಅಲ್ಲಿಗೆ ಬೊನ್ ಇಟ್ಟು ಚಿರತೆ ಸೆರೆಹಿಡಿಯಲು ಕಾರ್ಯಚರಣೆ ಮಾಡಲಾಗುವುದು ಎಂದಿದ್ದಾರೆ
ಶೀಘ್ರದಲ್ಲೆ ಕೆ ಬೆಳ್ಳೂರು, ಕೂಳಗೆರೆ ವ್ಯಾಪ್ತಿಯಲ್ಲಿ ಚಿರತೆ ಕುರಿತು ಜನರು ಅನುಸರಿಸಬೇಕಾದ ಕ್ರಮ ಕುರಿತು ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ




