Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ : ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿ

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಮೂರು ಚಿರತೆಗಳು ಏಕಕಾಲದಲ್ಲಿ  ದಾಳಿ ನಡೆಸಿ ನಾಲ್ಕು ಕುರಿ ಬಲಿ ತೆಗೆದುಕೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲಿ  ನಡೆದಿದೆ.

ಗ್ರಾಮದ ರತ್ನಮ್ಮ ಕೋಂ ಬಸವರಾಜು ಎಂಬುವರ ಕುರಿಗಳೇ ಬಲಿಯಾಗಿದ್ದು, ಇಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಚಿರತೆಗಳು  ಗ್ರಾಮಕ್ಕೆ ನುಗ್ಗಿ  ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ  ಏಕಕಾಲದಲ್ಲಿ ದಾಳಿ ನಡೆಸಿದ್ದು, ಬಲಿ ತೆಗೆದುಕೊ‌ಂಡಿದ್ದು, ಈ ಘಟನೆಯಿಂದ ಗ್ರಾಮಸ್ಥರು ಭಯಬೀತರಾಗಿದ್ದು, ಲಕ್ಷಾಂತರ ರೂ ಬೆಲೆಬಾಳುವ ನಾಲ್ಕು ಕುರಿಗಳ ಬಲಿಯಾಗಿದ್ದು, ಒಂದು ಮೇಕೆಗೆ ತೀವ್ರಗಾಯಗೊಂಡಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಜ್  ಹಾಗೂ ಸಿಬ್ಬಂದಿಗಳು, ಪೊಲೀಸರು, ಪಶು ಇಲಾಖೆ ವೈದ್ಯರು  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮದ ಮುಖಂಡ ನಾಗಮಾದೇವು ಮಾತನಾಡಿ, ರತ್ನಮ್ಮ ಕುಟುಂಬ ಬೋವಿ ಜನಾಂಗದ ಕಡುಬಡವರಾಗಿದ್ದು,ಕುರಿ ಸಾಕಿ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಪರಿಹಾರ ನೀಡಬೇಕು  ಜೊತೆಗೆ ಗ್ರಾಮದ ಜನರಿಗೆ ಭಯದ ವಾತಾವರಣ ನಿರ್ಮಿಸಿರುವ ಚಿರತೆಗಳನ್ನು ಬೋನು ಇಟ್ಟು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ