Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್ ಪೇಟೆ | ವಿಠಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ ಸಂತೋಷ್ ಕುಮಾರ್ ಆಯ್ಕೆ

ಕೆ.ಆರ್ ಪೇಟೆ ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸವಿತಾ ಸಂತೋಷ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ರೂಪ ಪರಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ
ಸವಿತಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದೇ ಇರುವ ಕಾರಣ ಚುನಾವಣಾಧಿಕಾರಿ ತಾ.ಪಂ.ಇಓ ಸತೀಶ್ ಅವರು ಸವಿತಾ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು, ಪಿಡಿಓ ಅಭಿವೃದ್ಧಿ ಗೀತಾchoice ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರಾದ ಸವಿತಾ ಅವರನ್ನು ಮುಖಂಡರಾದ ದೊದ್ದನಕಟ್ಟೆ ಕಿರಣ್, ಕಾಪನಹಳ್ಳಿ ಹರೀಶ್, ವಿಠಲಾಪುರ ದೇವರಾಜು, ರೇವಣ್ಣ, ತೋಟದಮನೆ ವೆಂಕಟೇಶ್, ಚಿಕ್ಕಗಾಡಿಗನಹಳ್ಳಿ ಬಸವೇಶ್, ತಾ.ಪಂ.ಮಾಜಿ ಸದಸ್ಯ ಸೋಮಶೇಖರ್, ಯಗಚಗುಪ್ಪೆ ಶಿವಲಿಂಗಪ್ಪ, ತೆಂಡೇಕೆರೆ ನಿಂಗಯ್ಯ, ಗ್ರಾ.ಪಂ.ಸದಸ್ಯರಾದ ರವೀಂದ್ರ, ಗೀತಾ, ವನಿತಾ, ಪಿ.ಕೆ.ಕುಮಾರ್, ಸಾಕಮ್ಮಸೋಮಶೇಖರ್, ರೂಪಪರಮೇಶ್, ಸಂತೋಷ್, ಕಾಳೇನಹಳ್ಳಿ ಕುಮಾರ್ ಇತರರು ಉಪಸ್ಥಿತರಿದ್ದು ಅಭಿನಂದಿಸಿದರು.

ಸವಿತಾಸಂತೋಷ್ ಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಚಿಕ್ಕಗಾಡಿಗನಹಳ್ಳಿ ಗ್ರಾಮಸ್ಥರು ಹಾಗೂ ಸವಿತಾ ಸಂತೋಷ್ ಕುಮಾರ್ ಅವರ ಬೆಂಬಲಿಗರು ಪಟಾಕಿಗಳನ್ನು ತಿಳಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಗ್ರಾ.ಪಂ. ಅಧ್ಯಕ್ಷೆ ಸವಿತಾ ಸಂತೋಷ್ ಕುಮಾರ್ ಮಾತನಾಡಿ, ನಮ್ಮ ಪಂಚಾಯ್ತಿ ವ್ಯಾಪ್ತಿಗೆ 12 ಗ್ರಾಮಗಳು ಸೇರುತ್ತವೆ. ಈ ಎಲ್ಲ ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಕುಡಿಯುವ ನೀರು, ಬೀದಿ ದೀಪಗಳು ಸೇರಿದಂತೆ ಅತಿ ಅವಶ್ಯಕತವಿರುವ ಕೆಲಸ ಕಾರ್ಯಗಳನ್ನು ಮೊದಲ ಆದ್ಯತೆಯಲ್ಲಿ ಮಾಡುತ್ತೇನೆ. ಸರ್ಕಾರದ ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ