Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಆಯ್ಕೆ

ಮಂಡ್ಯದ ವಿ.ವಿ. ರಸ್ತೆಯ ಮಂಡ್ಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರನ್ನು ಹಾಲಹಳ್ಳಿ ಅಶೋಕ್ ಅವರ ನೇತೃತ್ವದಲ್ಲಿ ಒಟ್ಟು 13 ಮಂದಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಾಮಾನ್ಯ ವರ್ಗದಿಂದ ಎಚ್.ಸಿ. ಅನಿಲ್ ರಾಜ್ ಹೊಸಹಳ್ಳಿ, ಅಶೋಕ ಎಚ್ ಹಾಲಹಳ್ಳಿ, ಎನ್. ನಾಗೇಶ್, ಹೊಸಹಳ್ಳಿ, ಎಂ.ಮಹೇಶ್ ಶಂಕರನಗರ, ಪಿ.ಎಂ. ರಾಘವೇಂದ್ರ ನೆಹರು ನಗರ, ಬಿ.ಸಿ. ಸುರೇಶ್ ಸೂನಗಹಳ್ಳಿ, ಹಿಂದುಳಿದ ವರ್ಗ ಪ್ರವರ್ಗ-ಎ ಮೀಸಲು ವರ್ಗದಿಂದ ತಿರುಮಲಾಚಾರಿ, ಹಿಂದುಳಿದ ವರ್ಗ ಪ್ರವರ್ಗ-ಬಿ ಮೀಸಲು ವರ್ಗದಿಂದ ಎನ್. ಶಶಿಧರ್ ಚಿಕ್ಕೇಗೌಡನ ದೊಡ್ಡಿ, ಮಹಿಳಾ ಮೀಸಲು ವರ್ಗದಿಂದ ಡಿ.ಬಿ. ಪ್ರಮೀಳಾ ಹಾಲಹಳ್ಳಿ, ಸಿ. ಲತಾ ಪ್ರದೀಪ್ ಸಿದ್ದೇಗೌಡ ಬಸರಾಳು, ಪರಿಶಿಷ್ಟ ಜಾತಿಯಿಂದ ಎಚ್‌.ಟಿ. ಜನಾರ್ದನಸ್ವಾಮಿ, ಪರಿಶಿಷ್ಟ ವರ್ಗದಿಂದ ಬಿ.ಜೆ. ಸೋಮಶೇಖರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕಿನ ರಿಟರ್ನಿಂಗ್ ಅಧಿಕಾರಿ ಎನ್.ಎಲ್. ರವಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ