75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸುಭಾಶ್ ನಗರ ಹಾಗೂ ರಾಮೇನಹಳ್ಳಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟಿರುವ ಸಮಾಜ ಸೇವಕ ಫೈಟರ್ ರವಿ ಇಂದು ಅಧಿಕೃತವಾಗಿ ಉದ್ಘಾಟಿಸಿದರು.
ನಾಗಮಂಗಲ ಪಟ್ಟಣದ ಒಂದನೇ ವಾರ್ಡ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ನಗರ ಹಾಗೂ ದೇವಲಾಪುರ ಹೋಬಳಿಯ ರಾಮೇನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ರಾಷ್ಟ ಧ್ವಜ ಹಾರಿಸಿದರು.
ತಾಲೂಕಿನ ಪುರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ಸುಭಾಷ್ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಪ್ರಮುಖವಾಗಿ ಕುಡಿಯವ ನೀರಿನ ಸಮಸ್ಯೆ ಉಂಟಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಬಗ್ಗೆ ವಾರ್ಡ್ ಜನರು ಫೈಟರ್ ರವಿಯವರ ಬಳಿ ನಮಗೆ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಕೊಡಿ ಎಂದು ಕೇಳಿದ್ದರು.ಜನರ ಕೋರಿಕೆಯಂತೆ ಫೈಟರ್ ರವಿ ಅವರು,ಎರಡೂ ಕಡೆ ನೀರಿನ ವ್ಯವಸ್ಥೆ ಕಲ್ಪಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಶುದ್ಧವಾದ ಕುಡಿಯುವ ನೀರು ಸಿಗಲಿದೆ.
ಇದೇ ಸಂದರ್ಭದಲ್ಲಿ ವಾರ್ಡಿನ ಜನರು ಫೈಟರ್ ರವಿ ಅವರಿಗೆ ಮೈಸೂರು ಪೇಟ,ಹಾರ ಹಾಕಿ ಹೃದಯ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಯವರು, ನಾನು ಜನರಿಗಾಗಿ ಕೆಲಸ ಮಾಡುತ್ತೇನೆ. ನಾನು ಒಂದು ರೂಪಾಯಿ ಕೆಲಸ ಮಾಡಿದರೂ, ಅದು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಆಗಿರುತ್ತದೆ.ನನ್ನ ಬಗ್ಗೆ ಟೀಕೆ ಮಾಡುವವರು ತಾಕತ್ತಿದ್ದರೆ ಅವರು ಅಭಿವೃದ್ಧಿ ಮಾಡಲಿ ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳು ಕಾಡಿನಲ್ಲಿ ಕೆಲಸ ಮಾಡುವುದು ದುಡ್ಡು ಮಾಡುವುದಕ್ಕಾಗಿ, ನೀವು ನಮ್ಮ ಕಷ್ಟಕ್ಕೆ ಬಂದಿದ್ದೀರಾ, ನಿಮ್ಮಂಥವರನ್ನ ಆ ದೇವರು ಚೆನ್ನಾಗಿ ಇಟ್ಟಿರಲಿ ಎಂದು ರವಿಯವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಿ. ಜೆ. ಕುಮಾರ, ನರಸಿಂಹ, ಮಂಜ, ಸಂತು, ಬೋರೇಗೌಡ, ಪೈoಟರ್ ಮೋಹನ,ರತ್ನಮ್ಮ, ಬಾಲರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು




