Friday, November 20, 2026

ಪ್ರಾಯೋಗಿಕ ಆವೃತ್ತಿ

ಸ್ವಚ್ಛ-ಸಮೃದ್ಧ ನಾಡು ಕಟ್ಟಲು ಸಂಯುಕ್ತ ಜನತಾದಳ ಬೆಂಬಲಿಸಿ

ಸ್ವಾತಂತ್ರ್ಯ ಮಹೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛ, ಸಮೃದ್ಧ ನಾಡು ಕಟ್ಟಲು ಪ್ರತಿಯೊಬ್ಬ ಪ್ರಜೆಯೂ ಸಹಕರಿಸಬೇಕೆಂದು ಸಂಯುಕ್ತ ಜನತಾದಳ ರಾಜ್ಯ ಅಧ್ಯಕ್ಷ ಮಹಿಮಾ ಪಾಟೀಲ್ ತಿಳಿಸಿದರು.

ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಸಂಯುಕ್ತ ಜನತಾದಳದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ರಾಜ್ಯದಲ್ಲಿ ಜನಪರ ಆಡಳಿತ ನೀಡಿದ್ದ ಮಾಜಿ ಮುಖ್ಯಮಂತ್ರಿಗಳಾದ ಜೆ. ಎಚ್.ಪಟೇಲ್, ರಾಮಕೃಷ್ಣ ಹೆಗಡೆಯಂತಹ ಮಹನೀಯರು ಹಾಕಿಕೊಟ್ಟ ಆಡಳಿತದ ಭದ್ರಬುನಾದಿ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಅರಿವು ಮೂಡಿಸಬೇಕು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಸುವ ಅವಕಾಶಗಳಿಗೆ ಈಗ ಕಾಲ ಕೂಡಿ ಬಂದಿದ್ದು, ಇಂತಹ ಸಂದರ್ಭದಲ್ಲಿ ಎಲ್ಲರೂ ನಮ್ಮೊಟ್ಟಿಗೆ ಸಹಕಾರ ನೀಡುವ ಮುಖಾಂತರ ಸಮೃದ್ಧ, ಸ್ವಚ್ಛ ನಾಡು ಕಟ್ಟಲು ಸಂಯುಕ್ತ ಜನತಾದಳವನ್ನು ಬೆಂಬಲಿಸಲು ಮನವಿ ಮಾಡಿದರು .

ಇದೇ ಸಂದರ್ಭದಲ್ಲಿ ರಾಜ್ಯ ರೈತ ವಿಭಾಗದ ಅಧ್ಯಕ್ಷ ಡಿ.ಕೆ ಶ್ರೀನಿವಾಸ್ ಹಾಗೂ ಸಂಯುಕ್ತ ಜನತಾದಳದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ