Monday, October 28, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಎಸ್‌ಡಿಎಂಸಿಯಿಂದ ಶಾಲಾ ಆವರಣದ ಗಿಡ-ಗಂಟೆಗಳ ತೆರವು

ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಮಕ್ಕಳು ಆಟ ಮಾಡಲು ಸೂಕ್ತ ಕ್ರೀಡಾಂಗಣದ ಅವಶ್ಯಕತೆ ಇರುವುದರಿಂದ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಜೆಸಿಬಿ ಮೂಲಕ ಗಿಡಗಂಟೆಗಳನ್ನು ತೆರವುಗೊಳಿಸಲು ಮುಂದಾಗಿದ್ದೇವೆ, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಗಿಡಗಂಟೆಗಳ ತೆರವು ಕಾರ್ಯ ನಡೆಯುತ್ತಿದೆ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್
ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಮಕ್ಕಳು ಆಟ ಮಾಡಲು ಸೂಕ್ತ ಕ್ರೀಡಾಂಗಣದ ಅವಶ್ಯಕತೆ ಇರುವುದರಿಂದ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಜೆಸಿಬಿ ಮೂಲಕ ಗಿಡಗಂಟೆಗಳನ್ನು ತೆರವುಗೊಳಿಸಲು ಮುಂದಾಗಿದ್ದೇವೆ, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಗಿಡಗಂಟಿಗಳ ತೆರವು ಕಾರ್ಯ ನಡೆಯುತ್ತಿದೆ ಎಂದರು.

ಶಾಲಾ ಆವರಣದೊಳಗೆ ಇರುವ ಅನುಪಯುಕ್ತ ನೀರಿನ ಹಳೆಯ ಟ್ಯಾಂಕ್ ಹಾಗೂ ಪಂಪ್ ಹೌಸ್ ನ ಕಟ್ಟಡವನ್ನು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಬೇಕು, ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಕಟ್ಟಡ ಮತ್ತು ಟ್ಯಾಂಕ್ ತೆರವಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್ ಪ್ರತಿಕ್ರಿಯಿಸಿ ಅನುಪಯುಕ್ತ ನೀರಿನ ಹಳೆಯ ಟ್ಯಾಂಕ್ ಹಾಗೂ ಪಂಪ್ ಹೌಸ್ ತೆರವಿನ ಬಗ್ಗೆ ಶಾಲೆಯಿಂದ ಮನವಿ ಪತ್ರಗಳು ಬಂದಿದ್ದು, ಸದ್ಯದಲ್ಲಿಯೇ ಅಲ್ಲಿಗೆ ಭೇಟಿ ನೀಡಿ ಟ್ಯಾಂಕ್ ಹಾಗೂ ಪಂಪ್ ಹೌಸ್ ಕಟ್ಟಡದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!