ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಾಂಡವಪುರ ಪಟ್ಟಣದ ಐತಿಹಾಸಿಕ ಹಿರೋಡೆ ಕೆರೆಯಲ್ಲಿ ಕೋಡಿ ಬಿದ್ದು ರಭಸವಾಗಿ ಬಿಳಿ ನೊರೆಯಂತೆ ನೀರು ಹರಿಯುತ್ತಿರುವುದನ್ನು ನೋಡಲು ಬಹು ಸುಂದರವಾಗಿದೆ.
ಕೋಡಿ ಬಿದ್ದು ನೀರು ಹರಿಯುತ್ತಿರುವ ಹಿರೋಡೆ ಕೆರೆ ನೋಟ ವೀಕ್ಷಿಸಲು ಸ್ಥಳೀಯರು ಆಗಮಿಸುತ್ತಿದ್ದಾರೆ.ಹಲವರು ಗಾಳ ಹಾಕಿ ಮೀನು ಹಿಡಿಯುತ್ತಿದ್ದಾರೆ. ಹಿರೋಡೆ ಕೆರೆಗೆ ನೀರು ತುಂಬಿಕೊಂಡು ಕೋಡಿ ಬಿದ್ದಿರುವುದರಿಂದ ಉಪ ನಾಲೆಗಳ ಮೂಲಕ ಮುಂದಿನ ಭಾಗದ ನೂರಾರು ಎಕರೆ ಪ್ರದೇಶದ ಜಮೀನುಗಳಿಗೆ ನೀರು ಹರಿಯುತ್ತಿದ್ದು,ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಅತಿ ಹೆಚ್ಚಿನ ಪ್ರಮಾಣದ ನೀರು ಕೋಡಿ ಬಿದ್ದರೆ ನಾಲೆ ಏರಿ ಒಡೆಯುವ ಆತಂಕವೂ ಸೃಷ್ಟಿಯಾಗುತ್ತದೆ. ಒಟ್ಟಾರೆ ಪಾಂಡವಪುರ ಪಟ್ಟಣದ ಹಿರೋಡೆ ಕೆರೆ ನೀರು ಕೋಡಿ ಬಿದ್ದಿರುವುದು ನೋಡಲಂತೂ ನಯನ ಮನೋಹರವಾಗಿದೆ.