ವರದಿಗಾರ ಜಯಕುಮಾರ್ ಮೇಲೆ ನಡೆದಿರುವ ಹಲ್ಲೆಯನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡಿಸಿದ್ದಾರೆ. ಕೂಡಲೇ ಹಲ್ಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಕೆರಗೋಡು ಠಾಣಾ ವ್ಯಾಪ್ತಿಯ ಹಂಪಾಪುರದಲ್ಲಿ ಬಡವರ ಜಮೀನಿನಲ್ಲಿ ಮರಕಡಿದದ್ದಲ್ಲದೆ, ತಡೆಯಲು ಬಂದವರ ಮೇಲೆ ಕಬ್ಬಿಣದ ರಾಡಿನಿಂದ ಇಬ್ಬರ ತಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಲಾಗಿದೆ. 70 ವರ್ಷದ ಮಹಿಳೆ ಮೇಲೆ ಹಲ್ಲೆಯಾಗಿದೆ. ಈ ಪ್ರಕರಣದ ಮಂಜೇಶ ಎಂಬ ಆರೋಪಿ ದಲಿತರ ಮೇಲೂ ದೌರ್ಜನ್ಯ ನಡೆಸಿ ಪ್ರಕರಣ ದಾಖಲಾಗಿದ್ದರೂ ಈತನನ್ನು ಬಂಧಿಸಿಲ್ಲ. ಹೀಗೆ ಇತರ ಆರೋಪಿಗಳನ್ನು ಬಂಧಿಸದೆ ರಾಜಕೀಯ ಒತ್ತಡಕ್ಕೆ ಮಣಿಯುತ್ತಿರುವುದು ದುರಂತಕ್ಕೆ ಕಾರಣ ಎಂದು ಅವರು ದೂರಿದ್ದಾರೆ.




