Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನೂರಡಿ ರಸ್ತೆಯಲ್ಲಿ ಮರ ಕಡಿತಕ್ಕೆ ಖಂಡನೆ

ಮಂಡ್ಯನಗರದ ನೂರಡಿ ರಸ್ತೆಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಖಂಡಿಸಿ ಜೈ ಕರ್ನಾಟಕ ಪರಿಷತ್ ವತಿಯಿಂದ ತಡೆ ಹಿಡಿಯಲಾಯಿತು.

ಅರಣ್ಯ ಇಲಾಖೆಯು ಸಾರ್ವಜನಿಕವಾಗಿ ಬಾರಿ ವಾಹನಗಳಿಗೆ ತೊಂದರೆಯಾಗುವ ಮರದ ಕೊಂಬೆಗಳನ್ನು ಕಡಿಯಲು ಅನುಮತಿಸಿದ್ದು ಆ ಕೊಂಬೆಗಳನ್ನು ಕಡಿಯದೇ ಪೂರ್ತಿ ಮರಗಳನ್ನು ಕಡಿಯಲಾಗಿದೆ ಎಂದು ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ದೂರಿದರು.

ಮುಂದಿನ ಪೀಳಿಗೆಗೆ ಗಿಡ ಮರಗಳನ್ನು ಉಳಿಸುವ ಕೆಲಸ ನಮ್ಮ ಕರ್ತವ್ಯವಾಗಿದೆ ಎಲ್ಲೆ ಆದರೂ ಸರಿ ಗಿಡ ಮರಗಳನ್ನು ಯಾರು ಅನಧಿಕೃತವಾಗಿ ಕಡಿಯಬಾರದು ಈ ಮರಗಳ ಉಳಿವಿಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ವೇಣುಗೋಪಾಲ್, ನಾಗೇಶ್, ಕೆಂಪೇಗೌಡರು, ಮಂಜುಳ, ತನುಜ, ಪುಟ್ಟಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!