Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪ್ರಾಂಶುಪಾಲರು – ಉಪನ್ಯಾಸಕರು ಅಪ್‌ಡೇಟ್ ಆಗಬೇಕಿದೆ : ಮಧು ಮಾದೇಗೌಡ

ಪ್ರಸ್ತುತ ದಿನಗಳಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಪ್‌ಡೇಟ್ ಆಗಬೇಕಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಧು ಜಿ. ಮಾದೇಗೌಡ ಹೇಳಿದರು.

ಮಂಡ್ಯನಗರದ ಎಸ್.ಬಿ. ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಕಾರ್ಯಗಾರ, ಪ್ರಾಂಶುಪಾಲರಿಗೆ ಡೈರಿ ವಿತರಣೆ ಬ್ಯಾಗ್ ವಿತರಣೆ, ರಾಷ್ಟ್ರೀಯ ಕ್ರೀಡಾಪಟುಗಳಿಗೆ, ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ, ಪ್ರತಿಭಾನ್ವಿತ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿವಿಧ ಕ್ಷೇತ್ರಗಳ ಸಾಧಕ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿನೇ ದಿನೇ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳು ನಾಗಲೋಟದಲ್ಲಿ ದಾಪುಗಾಲು ಹಾಕುತ್ತಿದೆ, ಎಲ್ಲಾ ಕ್ಷೇತ್ರಗಳಲ್ಲೂ ಎಐ ಬಳಕೆಯಾಗುತ್ತಿದೆ, ಶಿಕ್ಷಣ ಕ್ಷೇತ್ರದಲ್ಲೂ ಬಳಕೆಯಾಗುತ್ತಿದೆ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಪ್‌ಡೇಟ್ ಆಗಬೇಕಿದೆ ಎಂದು ನುಡಿದರು.

ವಿದ್ಯಾರ್ಥಿಗಳ ಉಜ್ವಲಭವಿಷ್ಯ, ಭಾತದೇಶದ ಪ್ರಗತಿ ಶಿಕ್ಷಣದಲ್ಲಿದೆ, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಶ್ರಮದಿಂದ ಎಲ್ಲವೂ ಸಾಧ್ಯವಿದೆ, ಉಪನ್ಯಾಸಕರು ತಂತ್ರಜ್ಞಾನವನ್ನು ಕಲಿತು ಪಾಠಮಾಡಬೇಕಿದೆ, ಎಲ್ಲಿ ಸೋಲು ಕಾಣುತ್ತಿದೆಯೋ ಅಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಸಾಧ್ಯತೆ ಹೆಚ್ಚಿದೆ ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ವಾಗ್ಮಿ ಎಂ. ಕೃಷ್ಣೇಗೌಡ, ನಮಗೆ ತುಂಬ ಕಾಡುವುದು ನಾವು ಮಾತನಾಡುವಾಗ ನಮ್ಮ ಮನಸ್ಸುಗಳು ಸ್ವಚ್ಛಂದವಾಗಿಬೇಕು, ನಾನು ಎಷ್ಟೇ ಅದ್ಬುತ ಭಾಷಣ ಮಾಡಿದರೂ ಎನು ಪ್ರಯೋಜನ, ಮನಸ್ಸು ಏಕಾಗ್ರತೆಯಿಂದ ಕೇಳಿಸಿಕೊಳ್ಳಬೇಕು ಎಂದರು.

ನಮ್ಮಲ್ಲಿ ಸರ್ಕಾರ ಬಹಾಳ ಮುಖ್ಯವಾಗಿ ನಡೆಸಬೇಕಿರುವ ಕ್ಷೇತ್ರಗಳು ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು.ನಮ್ಮದಿಯಾಗಿ ಜನರು ಇರುವಂತೆ ನೋಡಿಕೊಡಿಕೊಳ್ಳಬೇಕು, ಸರ್ಕಾರ  ಫೇಲೂರು ಆಗಿದೆ, ಪೇಲ್ಯೂರು ಆಗಿರುವುದರಿಂದಲೇ ಖಾಸಗೀಕರಣವಾಗುತ್ತಿರುವುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಪದವಿ ಪೂರ್ವ ಶಿಕ್ಷಣ ಕಾಲೇಜಿನ ಉಪನಿರ್ದೇಶಕ ಸಿ. ಚೆಲುವಯ್ಯ, ಎಸ್.ಬಿ. ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ, ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ನಾಗೇಶ್, ಉಪಾಧ್ಯಕ್ಷ ಎಂ.ಎಲ್. ಕೃಷ್ಣೇಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಯು.ಎಸ್. ನಟರಾಜ್, ಪ್ರಧಾನ ಕಾರ್ಯದರ್ಶಿ ಪಿ. ಕಾಂತರಾಜು, ಕಾಂಗ್ರೆಸ್ ಮುಖಂಡ ಅಭಿಲಾಸ್, ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ