Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಅಪಾಯದಲ್ಲಿದೆ – ಎಚ್ಚೆತ್ತುಕೊಳ್ಳಿ: ಮಂಜುನಾಥ್

ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಅಪಾಯದಲ್ಲಿದ್ದು, ಶೋಷಿತ ಸಮುದಾಯಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂವಿಧಾನಾತ್ಮಕವಾಗಿ ಸಿಕ್ಕಿರುವ ಎಲ್ಲಾ ಹಕ್ಕು,ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆದಿಜಾಂಬವ ವಿಚಾರ ವೇದಿಕೆ ಅಧ್ಯಕ್ಷ ನಡಕಲಪುರ ಮಂಜುನಾಥ್ ಎಚ್ಚರಿಸಿದರು.

ಮಳವಳ್ಳಿ ಪಟ್ಟಣದ ಆದಿಜಾಂಬವ ವಿಚಾರ ವೇದಿಕೆ ಕಛೇರಿಯಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸಂವಿಧಾನ ಕರಡು ರಚನಾ ಸಮಿತಿ ಸಭೆಯ ಸದಸ್ಯರುಗಳು ಹಲವಾರು ಕಾರಣ ನೀಡಿ ಗೈರಾದ ಸಂದರ್ಭದಲ್ಲಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸರಿಸುಮಾರು ಮೂರು ವರ್ಷಗಳ ಅವಧಿ ತಗೆದುಕೊಂಡು ಸಂವಿಧಾನವನ್ನು ರಚಿಸಿ,ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ತಳಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಹಕ್ಕು ಬಾಧ್ಯತೆಗಳನ್ನು ತಂದುಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಎಂ.ಎನ್.ಜಯರಾಜು, ಕೃಷ್ಣ, ಹಾಡ್ಲಿ ಸುರೇಶ್, ಪ್ರಶಾಂತ್, ದ್ಯಾವಪಟ್ಟಣ ಯತೀಶ್, ದುಗ್ಗನಹಳ್ಳಿ ನಾಗರಾಜು, ಪ್ರಸನ್ನ,ರಮೇಶ್,ಮಂಟೇಲಿಂಗಯ್ಯ, ಶಿವಕುಮಾರ್, ನಂಜುಂಡಸ್ವಾಮಿ,ಶಿವಾನಂದ ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ