Friday, November 20, 2026

ಪ್ರಾಯೋಗಿಕ ಆವೃತ್ತಿ

ರಾಜ್ಯಾದ್ಯಂತ ಸಂವಿಧಾನ ಸಂರಕ್ಷಕ ಪಡೆ ಸಂಘಟನೆ : ನಗರಕೆರೆ ಜಗದೀಶ್

ಸಂವಿಧಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರ ಜೊತೆಗೆ ಸಂರಕ್ಷಣೆ ಮಾಡಲು ರಾಜ್ಯಾದ್ಯಂತ ಜನರನ್ನು ಸಂಘಟಿಸಿ ಸಂವಿಧಾನ ಸಂರಕ್ಷಕ ಪಡೆಯನ್ನು ಕಟ್ಟಲಾಗುತ್ತಿದೆ ಎಂದು ಜನಶಕ್ತಿ ಸಂಘಟನೆಯ ನಗರಕೆರೆ ಜಗದೀಶ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಸಂಬಂಧ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಮೌಲ್ಯಗಳಿಗೆ ತದ್ವಿರುದ್ದ ದಿಕ್ಕಿನಲ್ಲಿ ದೇಶವನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿದೆ, ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ದಿ, ಸೋದರತ್ವದ ಜಾಗದಲ್ಲಿ ಸನಾತನವಾದ ಸಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ನೀತಿ ಅನುಷ್ಠಾನಗೊಳ್ಳುತ್ತಿದ್ದು, ಪ್ರತಿಯೊಬ್ಬರು ಜಾಗೃತರಾಗಬೇಕಿದೆ ಎಂದರು.

ಆಳುವವರನ್ನು ಪ್ರಶ್ನಿಸುವುದು, ಬೆದರಿಸುವುದನ್ನು ನಿಯಂತ್ರಿಸುವುದಕ್ಕೆ ಬದಲಾಯಿಸುವ ಶಕ್ತಿ ಬೀದಿಗೆ ಬಂದಾಗ ಮಾತ್ರ ಪ್ರಜಾಪ್ರಭುತ್ವವನ್ನು ನಿಜವಾಗಿ ಅರ್ಥದಲ್ಲಿ ಸುರಕ್ಷಿತಗೊಳಿಸಲು ಸಾಧ್ಯವಾಗುವುದರಿಂದ ರಾಜ್ಯಾಧ್ಯಂತ ಸಂಘಟಿಸಿ ಸಂವಿಧಾನ ಸಂರಕ್ಷಣಾ ಪಡೆಯನ್ನು ಕಟ್ಟಲಾಗುತ್ತಿದ್ದು, ಸಂವಿಧಾನ ಉಳಿವಿಗಾಗಿ ಪ್ರಗತಿಪರ ಚಿಂತಕರ ಸಹಕಾರ ಆಗತ್ಯವಾಗಿದೆ ಎಂದು ಹೇಳಿದರು.

ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನಕ್ಕೆ ಚಾಲನೆಯಾಗಿ ಸಂವಿಧಾನ ಸಂರಕ್ಷಕರ ಸಮಾವೇಶ ಏಪ್ರೀಲ್ ೨೬ರಂದು ಬೆಳಿಗ್ಗೆ ೧೧ ಗಂಟೆಗೆ ದಾವಣಗೆರೆ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ನಿವೃತ್ತ ಪ್ರಾಂಶುಪಾಲರಾದ ಎಂ.ವಿ ಕೃಷ್ಣ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವು ಸಮರ್ಪಕವಾಗಿ ಜಾರಿಯಾಗಬೇಕೆಂದು ಆಶಯ ಹೊಂದಿದ್ದರು, ದೇಶವನ್ನು ಆಳುವ ಸರ್ಕಾರಗಳು ಇಂದಿಗೂ ಜಾರಿ ಮಾಡಿಲ್ಲ, ಇದರ ಪರಿಣಾಮದಿಂದಾಗಿ ಇಂದಿಗೂ ಅಸಮಾನತೆ, ಶೋಷಣೆ ನಡೆಯುತ್ತಿದೆ, ಕೆಲ ರಾಜಕಾರಣಿಗಳು ಸಂವಿಧಾನದ ವಿರುದ್ದವಾಗಿ ಮಾತನಾಡಲು ಮುಂದೆ ಬಂದಿದ್ದಾರೆ, ಸಂವಿಧಾನದ ಆಶಯಗಳನ್ನು ಈಡೇರಿಸುವ ಹಿನ್ನೆಲೆಯಲ್ಲಿ ಕಟ್ಟುತ್ತಿರುವ ಸಂವಿಧಾನ ಸಂರಕ್ಷಕ ಪಡೆಗೆ ಪ್ರತಿಯೊಬ್ಬರು ಸದಸ್ಯರಾಗಬೇಕೆಂದು ಹೇಳಿದರು.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪೂರಿಗಾಲಿ ಜಯರಾಜು ಮಾತನಾಡಿ, ಭಾರತೀಯ ಪ್ರಜೆಗಳಾದ ನಾವು ಎನ್ನುವುದರ ಮೂಲಕ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ಪೀಠಿಕೆಯಲ್ಲಿ ನಾವೇಲ್ಲರೂ ಒಂದು ಎಂಬ ಸಂದೇಶವನ್ನು ಸಾರಿದ್ದಾರೆ, ಆದರೇ ಇತ್ತಿಚಿನ ರಾಜಕೀಯ ಪಕ್ಷಕಗಳು ಜಾತಿ ಧರ್ಮಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ, ಸಂವಿಧಾನ ವಿರುದ್ದವಾಗಿ ಆಳ್ವಿಕೆ ನಡೆಸುವ ಸರ್ಕಾರಗಳಿಗೆ ತಪ್ಪುಗಳನ್ನು ತಿದ್ದುವ ಕೆಲಸವನ್ನು ಪ್ರಗತಿಪರ ಚಿಂತಕರು ಮಾಡಬೇಕಾಗಿದೆ, ಈ ದಿಸೆಯಲ್ಲಿ ಸಂವಿಧಾನ ಸಂರಕ್ಷಣಾ ಪಡೆಯನ್ನು ಕಟ್ಟಲಾಗುತ್ತಿದ್ದು, ನೊಂದಾಣಿಯಾಗುವುದರ ಮೂಲಕ ಸಂಘಟನೆಗೆ ಶಕ್ತಿ ತುಂಬಬೇಕೆಂದು ಸಲಹೆ ನೀಡಿದರು.ವಿವಿಧ ಸಂಘಟನೆಗಳ ಮುಖಂಡರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖಂಡರಾದ ಉಪನ್ಯಾಸಕ ಪೃಥ್ವಿರಾಜ್, ಮಂಚಯ್ಯ, ಚೇತನ್‌ಕುಮಾರ್, ಘನಿಖಾನ್, ಕರ್ನಾಟಕ ಜನಶಕ್ತಿ ಸಿದ್ದರಾಜು, ಮಹದೇವಯ್ಯ, ಸುರೇಶ್, ಚಲುವರಾಜ್, ನಾಗರಾಜು, ಶಿವಲಿಂಗು, ಕೃಷ್ಣಮೂರ್ತಿ, ರಾಜಕುಮಾರ್, ಶ್ರೀನಿವಾಸ್, ಸಿದ್ದರಾಜು, ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ