Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ಅಧ್ಯಕ್ಷರಾಗಿ ದೀಪಕ್ ಆಯ್ಕೆ

ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷರಾಗಿ ಹೆಚ್.ಎಸ್.ದೀಪಕ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಕೃಷ್ಣಗೌಡ ಅವಿರೋಧ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೀಪಕ್ ಹಾಗೂ ಉಪಾಧ್ಯಕ್ಷೆ ಸ್ನಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದರು. ಬೇರ್‍ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅನಿತಾ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

೨೦೨೫- ೨೦೩೦ ನೇ ಸಾಲಿನ ಆಡಳಿತ ಮಂಡಳಿಗೆ ಒಟ್ಟು 17 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ದೀಪಕ್ ಮಾತನಾಡಿ ಎಲ್ಲರ ಸಹಕಾರದಿಂದ ಅಧ್ಯಕ್ಷ ಸ್ಥಾನ ದೊರೆಕಿದೆ. ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ಉದಯ. ಪಕ್ಷಾತೀತವಾಗಿ ಹಾಗೂ ೧೭ ಜನ ನಿರ್ದೇಶಕರ ಸಹಕಾರದೊಂದಿಗೆ ನಾಮ ನಿರ್ದೇಶಕ ಸದಸ್ಯರಾದ ದೀಪಕ್ ಅವರು ಕಳೆದ ಬಾರಿ ಅಧ್ಯಕ್ಷರಾಗಲು ಅವಕಾಶ ವಂಚಿತರಾಗಿದ್ದರು.ಈ ಬಾರಿ ದೀಪಕ್ ಅವರನ್ನು ಒಮ್ಮತವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ನಿರ್ದೇಶಕರಾದ ಎನ್.ದಾಸೇಗೌಡ, ಹೆಚ್.ಎಂ.ಸಿದ್ದರಾಜು, ಬಿ.ವಿ.ಹರೀಶ್, ಎ.ಆರ್. ರಾಜ ನಾಯಕ, ಕೆ.ಟಿ.ಗಿರೀಶ್, ಟಿ.ಬಿ. ಚೈತ್ರ, ಡಿ.ಕೃಷ್ಣಗೌಡ ಪಿ.ಕೆ.ಚಂದ್ರಶೇಖರ್, ಉಮೇಶ್, ಟಿ.ಎಲ್.ನಾಗರಾಜ, ಎಂ.ಎನ್.ಶಿವನಾಗರಾಜು, ಬಿ.ಡಿ.ಧನಂಜಯ, ರೇಣುಕಾ, ಲತಾಮುರಳಿ ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ