ಸಹಕಾರ ಸಂಘಗಳು ರಾಜಕಾರಣದಿಂದ ಹೊರತಾಗಿದ್ದುಕ್ಕೊಂಡು ಸಹಕಾರಿ ತತ್ವದಡಿ ಕಾರ್ಯನಿರ್ಹಿಸಬೇಕು ಎಂದು ಹಿರಿಯ ಸಹಕಾರಿ ಡಿ.ಕೆ.ಕೃಷ್ಣ ಸಲಹೆ ನೀಡಿದರು
ಮದ್ದೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆ ಏರ್ಪಡಿಸಿದ್ದ “ಸಹಕಾರಿ : ಜಾಗೃತಿ ಕಾರ್ಯಕ್ರಮ”ದಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ಆಡಾಳಿತಾತ್ಮಕ ತರಬೇತಿ ವಿಷಯ ಸಿದ್ಧಪಡಿಸುವ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಹಕಾರ ಸಂಘಗಳ ದೈನಂದಿನ ದಾಖಲಾತಿಗಳ ನಿರ್ವಹಣೆಯಲ್ಲಿ ಪರಿಪಕ್ವತೆ ಸಾಧಿಸುವಲ್ಲಿ ಆಡಳಿತ ಮಂಡಳಿಯವರಲ್ಲಿ ಕಾಳಜಿ ಮತ್ತು ಜ್ಞಾನ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ತರಬೇತಿ ಅಗತ್ಯವಾದದ್ದು ಎಂದರು.

ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗು ಆಸಕ್ತ ಸಹಕಾರಿಗಳಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ತರಬೇತಿ ನೀಡಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದ ಡಿ ಸಿ ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಸುರೇಶ್, ಇಂತಹ ಕ್ರಮಗಳ ಸಹಕಾರ ಸಂಘಗಳ ಬಲವರ್ಧನೆಗೆ ಪೂರಕವಾಗಲಿವೆ ಎಂದರು.
ಸಹಕಾರ ಸಂಘಗಳ ಗಣಕೀರಣ ಹಾಗೂ ಸಾಪ್ಟ್ ವೇರ್ ಬಳಕೆ ಆಡಳಿತದಲ್ಲಿ ಪಾರದರ್ಶಕತೆ ತರಲು ನೆರವಾಗಲಿದೆ. ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ಆಡಳಿತದಲ್ಲಿ ತಾಂತ್ರಿಕತೆ ಕುರಿತು ವಿಷಯ ಅಳವಡಿಸಿ ತರಬೇತಿ ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರಬಹುದು ಎಂದು ಸಲಹೆ ನೀಡಿದರು.
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಕ್ಯಾತಘಟ್ಟ ರವಿಕುಮಾರ್ ಆರಂಭಿಕವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೆಶಕರುಗಳಿಗೆ ಹತ್ತು ತಂಡದಲ್ಲಿ ಇಪ್ಪತ್ತೇರಡು ದಿನಗಳ ತರಬೇತಿ ಆಗಬೇಕಾಗಿದ್ದು
ಆಡಳಿತಾತ್ಮಕ ಹಾಗೂ ತಾಂತ್ರಿಕ ಮತ್ತು ಸಹಕಾರಿಕಾಯ್ದೆಗಳ ಪರಿಚಯದ ಜೊತೆಗೆ ರಾಸುಗಳ ಪಾಲನೆ ಕೊಟ್ಟಿಗೆ ನಿರ್ವಹಣೆ ಕುರಿತು ತರಬೇತಿ ವಿಷಯ ಅಳವಡಿಸಿ, ತರಬೇತುದಾರರ ತರಬೇತಿ ಏರ್ಪಡಿಸಿ ಏಕಕಾಲದಲ್ಲಿ ಹತ್ತು ತಂಡ ತರಬೇತಿ ನಡೆಸಲು ಸಜ್ಜುಗೊಳಿಸಿ ಮದ್ದೂರು ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ನಿರ್ದೆಶಕರು ಹಾಗು ಸಹಕಾರಿಗಳಿಗೆ ತರಬೇತಿ ಸಕಲ ಸಿದ್ದತೆ ನಡೆಸುವಲ್ಲಿ ಎಲ್ಲರ ಸಹಕಾರ ಕೋರಿದರು.
ಸಂಪನ್ಮೂಲ ವ್ಯಕ್ತಿ ತೊರೆಶೆಟ್ಟಹಳ್ಳಿ ಪ್ರಸನ್ನ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆ ಕುಟುಂಬದ ಏಳಿಗೆಗೆ ಮಾತ್ರವಲ್ಲದೆ ದೇಶದ ಜೆ ಡಿ ಪಿ ಗೆ ಕೂಡ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ತರಬೇತಿ ಉಪಯುಕ್ತವಾಗಲಿದೆ ಎಂದರು.
ತರಬೇತಿ ವಿಷಯ ಅಳವಡಿಕೆ ಕಾರ್ಯಗಾರದಲ್ಲಿ ಸಬ್ಬನಹಳ್ಳಿ ಹೊನ್ನೇಗೌಡ, ವಳಗೆರೆಹಳ್ಳಿ ಪುಟ್ಟರಾಜು ವಿಷಯ ತಜ್ಞರಾಗಿ ಭಾಗವಹಿಸಿದ್ದರು.
ಪ್ರಗತಿಪರ ಸಂಘಟನೆಯ ಮಾರ್ಗದರ್ಶಕ ನ.ಲಿ.ಕೃಷ್ಣ, ಕಾರ್ಯನಿರ್ವಾಹಕ ಸಂಚಾಲಕ ಶ್ರೀಕಾ ಶ್ರೀನಿವಾಸ್ , ಹಾಗಲಹಳ್ಳಿ ಬಸವರಾಜು, ನಿವೃತ್ತ ಶಿಕ್ಷಕ ಚನ್ನಪ್ಪ, ಹುರಗಲವಾಡಿ ರಾಮಯ್ಯ, ತಗ್ಗಹಳ್ಳಿ ಗೋಪಾಲ್, ಮೆಣಸಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಧುಸೂದನ್, ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಜಿ ಕೆ ರಾಜು, ಮಾಲಗಾರನಹಳ್ಳಿ ಸಹಕಾರ ಸಂಘದ ನಿರ್ದೆಶಕ ಮಲವರಾಜು, ಛತ್ರದ ಹೊಸಹಳ್ಳಿ ಸಂಜಯ್ ಹಾಗೂ ಗೆಜ್ಜಲಗೆರೆ ಬಾಬು ಭಾಗವಹಿಸಿದ್ದರು.




