Thursday, June 13, 2024

ಪ್ರಾಯೋಗಿಕ ಆವೃತ್ತಿ

ಕಾರ್ಪೋರೇಟ್ ಶಕ್ತಿಗಳಿಗೆ ಬಿಜೆಪಿ ಪಕ್ಷದ ಮೇಲೆ ಪ್ರೀತಿ

ದೇಶದ ದೊಡ್ಡ‌ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ಅದರ ಮಾಲೀಕರುಗಳಿಗೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಬಗ್ಗೆ ಭಾರೀ ಪ್ರೀತಿ. ಏಕೆಂದರೆ 17 ಸಾವಿರ ಕೋಟಿಯಷ್ಟು ಸಾಲಮನ್ನಾ ಮಾಡಿರುವ, ಅದಕ್ಕಿಂತ ಮುಖ್ಯವಾಗಿ ಕಂಪನಿಗಳ ಆದಾಯದ ಮೇಲಿನ ಕಾರ್ಪೊರೇಟ್ ಟ್ಯಾಕ್ಸ್ ತೆಗೆದಿರುವ ಮೋದಿಜೀ ಅವರ ಬಗ್ಗೆ ಉದ್ಯಮ ವಲಯದಲ್ಲಿ ಭಾರಿ ನಂಬಿಕೆ ಮತ್ತು ಪ್ರೀತಿ ಇದೆ.

ಮೋದಿಜೀ ಮರಳಿ ಅಧಿಕಾರಕ್ಕೆ ಬಂದರೆ ಕಾರ್ಪೊರೇಟ್ ವ್ಯಕ್ತಿಗಳಿಗೆ ಮತ್ತಷ್ಟು ಗುತ್ತಿಗೆ, ಲಾಭಗಳು ಸಿಗಬಹುದು ಎನ್ನುವ ಆಶಾಭಾವನೆ ಇದೆ. ಇದಕ್ಕೆ ಬದಲಾಗಿ ಇಂಡಿಯಾ ಒಕ್ಕೂಟದ ಬಗ್ಗೆ ಕಾರ್ಪೊರೇಟ್ ಕಂಪನಿಗಳಿಗೆ ಅಷ್ಟು ಒಲವಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನಕಲ್ಯಾಣ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿ ಮಾಡಲಿದ್ದು, ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಕಾರ್ಪೊರೇಟ್ ತೆರಿಗೆ ಹಾಕುವ ಮೂಲಕ ಜಾರಿ‌ ಮಾಡುತ್ತೆ ಎನ್ನುವ ಹೆದರಿಕೆ ಇದೆ.

ಹಾಗಾಗಿ ಕಾರ್ಪೊರೇಟ್ ಸಿಂಡಿಕೇಟ್ ಗಳು ತಮ್ಮ ಕೈಗಳಲ್ಲಿರುವ ಮೀಡಿಯಾ ಹೌಸ್ ಗಳ ಮೂಲಕ ಎನ್‌ಡಿಎ ಪರವಾದ ಅಲೆ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಿವೆ ಎಂಬ ಮಾತು ಮುಂಬೈ ಷೇರು ಪೇಟೆಯಲ್ಲಿ ಕೇಳಿ ಬರುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!