ವರದಿ : ಪ್ರಭು ವಿ ಎಸ್
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು
ಅಧಿಕಾರಕ್ಕೆ ತಂದಿದ್ದು, ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡು ಅವರಿಗೆ ಮುಖ್ಯಮಂತ್ರಿ ಸ್ಥಾನ
ನೀಡಬೇಕೆಂದು ಶಾಸಕ ಕೆ.ಎಂ.ಉದಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ತಿಮ್ಮದಾಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ಚುನಾವಣೆ ಹಾಗೂ ಪಕ್ಷ ಸಂಘಟನೆಯ ದೃಷ್ಠಿಯಿಂದ ಡಿ.ಕೆ.ಶಿವಕುಮಾರ್ ಅವರನ್ನು
ಮುಖ್ಯಮಂತ್ರಿಯನ್ನಾಗಿಸಬೇಕೆಂಬುವುದು ತಮ್ಮ ವೈಯಕ್ತಿಯ ಅಭಿಪ್ರಾಯವಾಗಿದ್ದು, ರಾಜ್ಯದಲ್ಲಿ ಇದೇ
ವಿಚಾರ ದಿನನಿತ್ಯ ಚರ್ಚೆಯಾಗುತ್ತಿದ್ದು, ಹೀಗಾಗಿ ಪಕ್ಷದ ಹೈಕಮಾಂಡ್ ಇಂತಹ ಗೊಂದಲಗಳಿಗೆ ತೆರೆ
ಎಳೆಯಬೇಕೆಂಬ ಉದ್ದೇಶ ಹೊಂದಿ ಕೆಲ ಶಾಸಕರ ನಿಯೋಗ ದೆಹಲಿಗೆ ಹೋಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ
ಕೊಡುವ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳೆವಣಿಗೆಯನ್ನು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶೀಘ್ರದಲ್ಲೆ ಹೈಕಮಾಂಡ್ ಗೊಂದಲಗಳಿಗೆ ತೆರೆ ಎಳೆಯುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಬಗ್ಗೆ ನಮಗೆ ಪ್ರಶ್ನೆಗಳಿಲ್ಲ. ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ ದೃಷ್ಠಿಯಿಂದ
ಸಿ.ಎಂ.ಸ್ಥಾನ ನೀಡಬೇಕೆಂದು ನನ್ನನ್ನು ಒಳಗೊಂಡಂತೆ ಕೆಲ ಶಾಸಕರು ಅವರವರ ಅಭಿಪ್ರಾಯವನ್ನು
ವ್ಯಕ್ತಪಡಿಸಿದ್ದಾರೆಂದರು.
ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದು ಪಕ್ಷದಲ್ಲಿ ಯಾವುದೆ ಒಡಕಿಲ್ಲ ನಾವೆಲ್ಲರೂ
ಒಟ್ಟಾಗಿದ್ದು ಕೆಲ ಮಾಧ್ಯಮಗಳ ಸೃಷ್ಠಿಯಿಂದಾಗಿ ಹಲವು ಗೊಂದಲಗಳು ಉಂಟಾಗಿದ್ದು ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಿರುವ ಹಿನ್ನೆಲೆಯಲ್ಲಿ ಕೊಟ್ಟ ಮಾತಿಗೆ ಹೈಕಮಾಂಡ್ ತಪ್ಪಬಾರದೆಂದ ಶಾಸಕ ಡಿ.ಕೆ.ಶಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರು, ಬಹಳಷ್ಟು ಶಾಸಕರಿಗೆ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯಿದ್ದು, ಆ ನಿಟ್ಟಿನಲ್ಲಿ ದೆಹಲಿಗೆ ಶಾಸಕರು ತೆರಳಿದ್ದು, ಜತೆಗೆ
ಪಕ್ಷಕ್ಕೆ ಧಕ್ಕೆಯಾಗಬಾರದು ಎಂಬ ನಿಟ್ಟಿನಲ್ಲಿ ಸಿಎಂ ಚರ್ಚೆ ವಿಚಾರಕ್ಕೆ ತೆರೆ ಎಳೆಯುವುದಕ್ಕೆ ಹಲವು ಶಾಸಕರು
ಹೈಕಮಾಂಡ್ ಭೇಟಿ ಮಾಡಲು ತೆರಳಿದ್ದಾರೆಂದರು.
ಪಕ್ಷದ ಶಾಸಕರಿಗಿಂತ ವಿರೋಧ ಪಕ್ಷದವರೆ ಹೆಚ್ಚು ಚರ್ಚೆ ಮಾಡುತ್ತಿದ್ದು, ನಮ್ಮ ಪಕ್ಷದ ತೀರ್ಮಾನ ವಿರೋಧ ಪಕ್ಷಕ್ಕೆ ಏನು ಸಂಬಂಧ ಎಂದು ಪ್ರಶ್ನಿಸಿದಲ್ಲರಲ್ಲೆ 140 ಮಂದಿ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದು, ಇದಕ್ಕೆ ಯಾವುದೇ ಅನುಮಾನ ಬೇಡ ಪಕ್ಷದ ಹಿತ ದೃಷ್ಠಿಯಿಂದ ಅನಗತ್ಯ ಚರ್ಚೆ ಬೇಡ. ಇಂತಹ ವಿದ್ಯಾಮಾನಗಳಿಗೆ ತೆರೆ ಎಳೆಬೇಕೆಂಬ ಉದ್ದೇಶಹೊಂದಿ ದೆಹಲಿಗೆ ತೆರಳಿದ್ದಾರೆಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕೊಡಬೇಕೆಂಬ ಬೇಡಿಕೆಯಿದ್ದು, ಪಕ್ಷ
ಸಂಘಟಿಸುವ ದೃಷ್ಠಿಯಿಂದ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಅವರು ಉತ್ತಮವಾಗಿ ಆಡಳಿತ
ನಡೆಸುತ್ತಿದ್ದು ಅವರ ನಾಯಕತ್ವದ ಬಗ್ಗೆ ಯಾರೊಬ್ಬರು ಪ್ರಶ್ನೆ ಮಾಡಿಲ್ಲ ಸಮಸ್ಯೆಯನ್ನು ಬಗೆ
ಹರಿಸಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೆಕೆಂದರು, ವಿರೋಧ ಪಕ್ಷದವರ ಬಾಯಿಗೆ ತುತ್ತಾಗಬಾರದು
ಡಿ.ಕೆ.ಶಿ.ಸಿ.ಎಂ.ಆಗುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದ್ದು, ಪಕ್ಷದ ನಿರ್ಧಾರಕ್ಕೆ ನಾವು
ಬದ್ಧರಾಗಿದ್ದು, ಎರಡುವರೆ ವರ್ಷ ಬದಲಾವಣೆ ಮಾತುಕತೆ ತಮಗೆ ಗೋತ್ತಿಲ್ಲ ಮಾತು ಕೊಟ್ಟಿದ್ದರೆ
ಉಳಿಸಿಕೊಳ್ಳಲಿ ಕೊಟ್ಟ ಮಾತಿಗೆ ತಪ್ಪಬಾರದು. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು
ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿ ಬಣ ಎಂಬುವುದಿಲ್ಲ. ಇಬ್ಬರು ನಾಯಕರೇ ಇದರಲ್ಲಿ ಪರ
ವಿರೋಧ ಬರುವುದಿಲ್ಲ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಲಿದ್ದು, ಇಬ್ಬರ ಮೇಲೂ ಅಭಿಮಾನವಿದ್ದು,
ಯರ್ಯಾರ ಶಕ್ತಿ ಏನು ಅಂತ ನೋಡಿದ್ದು, ಸಂಖ್ಯೆ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ. ಸಿದ್ದರಾಮಯ್ಯ
ಅವರಿಗೆ ಅವರದೆಯಾದ ವರ್ಚಸ್ಸು, ಓಟ್ ಬ್ಯಾಂಕ್ ಇದ್ದು ಇದೆಲ್ಲವನ್ನು ಗಮನಿಸಿ ಅನುಭವದ ಆಧಾರ ಮೇಲೆ
ಅವಕಾಶ ಮಾಡಿಕೊಟ್ಟಿದ್ದು, ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.




