ಸಾಮಾನ್ಯವಾಗಿ ನಾವು ಡಾ.ರಾಜ್ ಅವರ ಮನೆಯಲ್ಲೇ ಬೆಳೆದದ್ದು ಎಂದು ರಂಗಭೂಮಿ ಹಿರಿಯಕಲಾವಿದ, ಚಲನಚಿತ್ರ ಹಾಸ್ಯ ಹಿರಿಯನಟ ಹೊನ್ನಾವಳ್ಳಿ ಕೃಷ್ಣ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ಸೆಸ್ ಭವನದಲ್ಲಿ ಮಂಡ್ಯ ಹೋಮಿಂಗ್ ಪಿಜನ್ ಆಸೋಷಿಯೇಷನ್ ಆಯೋಜಿಸಿದ್ದ ಮಂಡ್ಯ ಹೋಮಿಂಗ್ ಪಿಜನ್ ಆಸೋಷಿಯೇಷನ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕ ಪುನೀತ್ ಅವರು ಭಕ್ತಪ್ರಹ್ಲಾದ ಸಿನಿಮಾ ಪ್ರಾರಂಭವಾಗುವ ಒಂದು ವಾರದಲ್ಲಿ ಅಪ್ಪು ಹೊನ್ನಾವಳ್ಳಿ ಕೃಷ್ಣರನ್ನು ಕರಿಸಿ ಎಂದು ಅಮ್ಮವರಿಗೆ ಹೇಳಿದ ಮಾತು ನನ್ನನ್ನು ಚಕಿತಗೊಳಸಿತು, ಕೃಷ್ಣ ಇದ್ದರೆ ನಾನು ಅಭಿನಯಿಸೋದು ಎಂದು ಅಪ್ಪು ನುಡಿದ ಮಾತುಗಳನ್ನು ಸ್ಮರಿಸಿದರು.
ನನಗಿಂತಲೂ ಒಂದು ಪಟ್ಟು ಚೆನ್ನಾಗಿ ಪಾತ್ರಗಳನ್ನು ಮಾಡುವ ಅಪ್ಪು ಅಭಿನಯ ರೋಮಾಂಚನ ಗೊಳಿಸುತ್ತಿತ್ತು, ಭಕ್ತಪ್ರಹ್ಲಾದ ಸಿನಿಮಾದಲ್ಲಿ ಪ್ರಥಮಬಾರಿ ಬಣ್ಣಹಾಕಿದಾಗ ಅಣ್ಣವರು ಹಿರಣ್ಯಕಷಿಪು, ಅಪ್ಪು ಪ್ರಹ್ಲಾದ, ಅಣ್ಣವರು ಪ್ರಹ್ಲಾದನ ಕುರಿತು ಒಂದು ಸಂಭಾಷಣೆ ಎಲ್ಲಿರುವನು ಹರಿ, ಇಲ್ಲಿ ಇರುವನಾ, ಅಲ್ಲಿ ಇರುವನಾ, ತೊರಿಸು ನಿನ್ನ ಹರಿಯನ್ನ..ಎಂದು ಕಣ್ಣು ಬಿಟ್ಟಾಗ ಆಗ ಪುನೀತ್ ಅಪ್ಪಾಜಿ ಒಂದು ಮಾಡುವಂಗಾಗುತ್ತದೆ ಎಂದು ಹೇಳಿದ್ದನ್ನು ನುಡಿದರು.

ಕಲಾವಿದರಿಗೆ ಕಲೆ, ಅಭಿನಯದ ಭಯವಿದ್ದರೆ ಜಯ ಲಭಿಸುತ್ತದೆ ಎನ್ನುವುದನ್ನು ಅಣ್ಣವರು ಪುನೀತ್ ಗೆ ಹೇಳಿ, ಪಾತ್ರಗಳಿಗೆ ಜೀವತುಂಬಿಸುವ ಧೈರ್ಯ ವನ್ನು ಮತ್ತು ಅಭಿನಯಿಸುವ ವಿಧಾನಗಳನ್ನು ತಿಳಿಸಿಕೊಡುತ್ತಿದ್ದರು ಎಂದು ಹೇಳಿದರು.
ಬಳಿಕ ಮಾತನಾಡಿದ ಚಲನಚಿತ್ರ ಯುವ ನಾಯಕನಟ ಮದನ್, ವಿಶ್ವದ ಅತ್ಯಂತ ಹಳೆಯ ಸಾಕು ‘ಹಕ್ಕಿ’ ಪಾರಿವಾಳವಾಗಿದೆ, ಮನುಷ್ಯರ ಜೀವದ ಗೆಳೆತನದ ಸಾಕ್ಷಿಯ ದಿಕ್ಸೂಚಿಯಾಗಿದೆ, ಪಾರಿವಾಳ ಪಕ್ಷಿಯನ್ನು ಮನೆ ಮನೆಗಳನ್ನು ಗೆಳೆಯನ ರೀತಿ ಸಾಕುತ್ತಾ ಬಂದಿದ್ದಾರೆ ಎಂದು ನುಡಿದರು.
ಪಾರಿವಾಳಗಳು ಹಲವಾರು ವರ್ಷಗಳಿಂದ ಒಂದು ಕಡೆಯಿಂದ ಇನೊಂದು ಕಡೆಗೆ ಸುದ್ದಿಯನ್ನು ತಲುಪಿಸುವ ಕೆಲಸಕ್ಕೆ ಹೆಸರುವಾಸಿ ಆಗಿವೆ. ಹಿಂದೆ ರಾಜರ ಕಾಲದಲ್ಲಿ ಇವು ಓಲೆಕಾರರಂತೆ ಕೆಲಸ ಮಾಡುತ್ತಿದ್ದವು ಎಂದು ಹೇಳಲಾಗುತ್ತದೆ. ಯುದ್ಧದ ಮಾಹಿತಿಯನ್ನು ರವಾನಿಸು ಕರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಎ.ಎಸ್.ಪಿ ರುಕ್ಮಾಂಗದ, ಕೆ.ಆರ್.ಪಿ.ಎ ಮಧು, ವಿವಿಧ ಸಂಘಟನೆಗಳ ಮುಖಂಡರಾದ ಸಂಪತ್ಕುಮಾರ್, ಬೋರೇಗೌಡ, ವಿಕಾಶ್, ತೌಫಿಕ್ರಾಜ್, ಮಂಜುಯಾಧವ್, ನಂದಿಯಾಧವ್, ಹೋಮಿಂಗ್ ಪಿಜನ್ ಆಸೋಷಿಯೇಸನ್ ಗೌರವ ಅಧ್ಯಕ್ಷ ಎನ್.ಮಾರುತಿ, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ನವೀನ್ರಾಜ್, ಕರ್ಯರ್ಶಿ ಶಶಾಂಕ್ಗೌಡ, ಚಂದ್ರಶೇಖರ್, ನಾಗೇಶ್ ಮತ್ತಿತರರಿದ್ದರು.




