Friday, November 20, 2026

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ ವಿಧಾನಸಭಾ ಕ್ಷೇತ್ರ | ದರ್ಶನ್ ಪುಟ್ಟಣ್ಣಯ್ಯ ಆಸ್ತಿ ವಿವರ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಇಂದು ನಾಮಪತ್ರ ಸಲ್ಲಿಸಿದರು.

ಆಸ್ತಿ ವಿವರ
ಅವರ ಬಳಿ 1.90 ಲಕ್ಷ ರೂ. ನಗದು, ಅಮೆರಿಕಾದ ನಾನಾ ಬ್ಯಾಂಕ್‌ಗಳಲ್ಲಿನ 4 ಖಾತೆಗಳಲ್ಲಿ 1.34 ಕೋಟಿ ರೂ. ಠೇವಣಿ, ಹುಟ್ಟೂರು ಕ್ಯಾತನಹಳ್ಳಿ, ಮೈಸೂರು, ಬೆಂಗಳೂರಿನ ನಾನಾ ಖಾತೆಗಳಲ್ಲಿರುವ ಹಣ, ನಾನಾ ಕಂಪನಿಗಳಲ್ಲಿನ ಹೂಡಿಕೆಗಳು, ತಲಾ ಒಂದು ಮರ್ಸಿಡೀಸ್ ಬೆಂಚ್, ನಿಸಾನ್ ಟೆರಾನೋ ಕಾರು, 50 ಗ್ರಾಂ ಚಿನ್ನ ಸೇರಿದಂತೆ 2.46 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ.

ಅಮೆರಿಕಾದಲ್ಲಿ 4 ಮನೆಗಳು, ಬೆಂಗಳೂರಿನಲ್ಲಿ 1 ಪ್ಲಾಟ್, ಮೈಸೂರಿನಲ್ಲಿ 1 ಮನೆ ಸೇರಿದಂತೆ 31.90 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಹಾಗೆಯೇ 18.37ಕೋಟಿ ರೂ. ಮೌಲ್ಯದ ಸಾಲವನ್ನೂ ತೋರಿಸಿದ್ದಾರೆ. ಇವರು ಬಿ.ಇ ವ್ಯಾಸಂಗ ಮಾಡಿದ್ದಾರೆ.

ಪತ್ನಿ ಶಿಲ್ಪ ಅವರ ಅಮೆರಿಕಾ ಬ್ಯಾಂಕ್ ಖಾತೆಯಲ್ಲಿ 1.22 ಕೋಟಿ ರೂ., ಟೆಸ್ಲಾ ಮಾಡಲ್-3 ಕಾರು, 300 ಗ್ರಾಂ. ಚಿನ್ನಾಭರಣ ಸೇರಿದಂತೆ 1.71 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಮೈಸೂರಿನ ಬೋಗಾದಿಯಲ್ಲಿ 1 ನಿವೇಶನ, ಅಮೆರಿಕಾದಲ್ಲಿ 1ವಸತಿ ಕಟ್ಟಡ ಸೇರಿದಂತೆ 3.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 2.59 ಕೋಟಿ ಸಾಲ ಇದೆ ಎಂಬುದನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ