Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರೈಲಿಗೆ ಸಿಲುಕಿ ಯುವಕ ಸಾವು

ಸುಮಾರು 25 ರಿಂದ 30ರ ವಯೋಮಾನದ ಅಪರಿಚಿತ ಯುವಕ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಡ್ಯ ಹಾಗೂ ಹನಕೆರೆ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.

ರೈಲಿಗೆ ಸಿಲುಕಿರುವ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ತಲೆಯ ಭಾಗ ಛಿದ್ರಗೊಂಡಿದ್ದು, ಮೃತನ ಬಲ ತೋಳಿನಲ್ಲಿ `ಅಮ್ಮ ಎಸ್’ ಎಂಬ ಹಚ್ಚೆ ಗುರುತಿದೆ.

ಕಿತ್ತಳೆ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ತೊಟ್ಟಿರುವ ಈ ಯುವಕನ ಶವವನ್ನು ಮಂಡ್ಯ ಮಿಮ್ಸ್ ಶವಾಗಾರದಲ್ಲಿರಿಸಲಾಗಿದೆ. ವಾರಸುದಾರರಿದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ:0821-2516579 ಗೆ ಸಂಪರ್ಕಿಸುವಂತೆ ಕೋರಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ