ವ್ಯಕ್ತಿಯೊಬ್ಬನ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗಳು ಇಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಮಳವಳ್ಳಿ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ದಳವಾಯಿ ಕೋಡಿಹಳ್ಳಿ ಗ್ರಾಮದ ಎಂ.ಮಹೇಶ್ ರವರ ಪತ್ನಿ ಶಕುಂತಲಾ (37) ಮತ್ತು ಮಗಳು ಪ್ರಿಯಾ (18) ಮೃತಪಟ್ಟವರು.
ಏನಿದು ಘಟನೆ ?
ದಳವಾಯಿ ಕೋಡಿಹಳ್ಳಿ ಗ್ರಾಮದ ನಮ್ಮ ಪಕ್ಕದ ಮನೆಯ ನಿವಾಸಿ 35 ವರ್ಷದ ವಿವಾಹಿತ ಮುತ್ತುರಾಜು ಎಂಬ ವ್ಯಕ್ತಿ ನನ್ನ ಮಗಳಾದ ಪ್ರಿಯಾಳನ್ನು ಪರಿಚಯ ಮಾಡಿಕೊಂಡು ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತನೆಂದು ಪುಸಲಾಯಿಸಿದ್ದಾನೆ. ಇದಕ್ಕೆ ಒಪ್ಪದ ಶಕುಂತಲಾ ಮತ್ತು ಮಹೇಶ್ ನಾನು ನಿನಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮತ್ತು ಮಕ್ಕಳಿದ್ದಾರೆ ಮತ್ತೆ ಮದುವೆ ಸಾಧ್ಯವಿಲ್ಲ ಎಂದು ಮುತ್ತುರಾಜನಿಗೆ ಬುದ್ದಿ ಹೇಳಿದ್ದಾರೆ. ನಂತರ ಮಗಳಾದ ಪ್ರಿಯಾಳಿಗೆ ಬೇರೆಯ ವರನಿಗೆ ಮದುವೆ ಮಾಡೋಣ ಎಂದು ಸಿದ್ದತೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿದ ಮುತ್ತುರಾಜು, ಶಕುಂತಲಾ ಅವರಿಗೆ ಕರೆ ಮಾಡಿ, ಪ್ರಿಯಾಳನ್ನು ಬೇರೆ ಕಡೆಗೆ ಮದುವೆ ಮಾಡಿದರೇ ನಿಮ್ಮನ್ನು ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ್ದಾನೆ.
ಇದರಿಂದ ಮನನೊಂದ ಶಕುಂತಲಾ ಮತ್ತು ಪ್ರಿಯಾ ಇಬ್ಬರು ಭಾನುವಾರ ಬೆಳಿಗ್ಗೆ ಮನೆಯ ತೊಲೆಗೆ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆ ಎಂ.ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




