Monday, November 23, 2026

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಕೃತ – ಸಹಕಾರಿ ಸಂಘಗಳಲ್ಲಿ ರೈತರ ಕೃಷಿಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ

ಕೇಂದ್ರದ ರಾಷ್ಟ್ರೀಕೃತ ಮತ್ತು ರಾಜ್ಯದ ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ ಕೃಷಿ ಸಾಲಗಳನ್ನು ಮನ್ನಾ ಮಾಡಿ, ಮಂಡ್ಯದ ಕೆ.ಆರ್.ಎಸ್. ನಲ್ಲಿ ಸರ್ಕಾರ ಮಾಡಬೇಕೆಂದಿರುವ ಎಲ್ಲ ಮಾರಕ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಮಂಡ್ಯ ಜಿಲ್ಲೆ ವತಿಯಿಂದ ಪ್ರತಿಭಟನೆ ನಡೆಯಿತು.

ನಮ್ಮನ್ನು ಆಳುವ ಸರ್ಕಾರಗಳು ರೈತರು ಬೆಳೆದ ಎಲ್ಲಾ ತರದ ಬೆಳೆಗಳಿಗೆ ಸರಿಯಾದ ಬೆಲೆಯನ್ನು ನಿಗಧಿ ಮಾಡದೆ, ಜೀವನಾಡಿಯಾಗಿರುವ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ರೈತರಿಗೆ ಮಾರಕವಾಗಿರುವ ಕೆಲಸಗಳನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿ ಆಗ್ರಹಿಸಿದರು.

ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಜೂನ್ 15ನೇ ತಾರೀಕಿನೊಳಗೆ ಕಬ್ಬು ನುರಿಸಲು ಪ್ರಾರಂಭ ಮಾಡಬೇಕು ಮತ್ತು ಪೂರ್ಣ ಅವಧಿಗೆ ಎಂ.ಡಿ.ಯವರನ್ನು ನೇಮಕ ಮಾಡಬೇಕು. ಸರ್ಕಾರಗಳು ಇಳುವರಿಯನ್ನು ಆಧರಿಸಿ ಮಾಡಿರುವ ಕಬ್ಬಿನ ದರವನ್ನು ರದ್ದು ಮಾಡಿ ರಾಜ್ಯದಲ್ಲಿರುವ ಕಾರ್ಖಾನೆಗಳು ಏಕರೂಪದಲ್ಲಿ ಬೆಲೆಯನ್ನು ಕೊಡಬೇಕು. ಮತ್ತು ರೈತ ಬೆಳೆದ ಕಬ್ಬಿಗೆ ವಿಮೆ ಮಾಡಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ತೋಟಗಾರಿಕೆ ಬೆಳೆಗಳಿಗೆ ಒತ್ತು ಕೊಡುತ್ತಿದ್ದು, ತೆಂಗಿನ ಬೆಳೆಗೆ ಕಾಂಡದಲ್ಲಿ ರಸ ಸೋರುವ ರೋಗ ಕಾಣಿಸಿಕೊಂಡು ಇಳುವರಿ ಕಡಿಮೆಯಾಗಿ ರೈತರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತೋಟಗಾರಿಕಾ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಒತ್ತಾಯಿಸುತ್ತೇವೆ ಎಂದರು.

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಖಾಯಿಲೆ ತೋರಿಸಿಕೊಳ್ಳಲು ಬರುವ ರೋಗಿಗಳ 10 ರೂ. ಚೀಟಿಯನ್ನು 20 ರೂಪಾಯಿ ಮಾಡಿರುವುದು ಮತ್ತು ಡಾಕ್ಟರ್‌ಗಳು ಇಲ್ಲದೆ ಖಾಯಿಲೆ ತೋರಿಸಲು ಬರುವ ರೋಗಿಗಳು ಕಂಗಲಾಗಿದ್ದಾರೆ ಅಸ್ಪತ್ರೆಯ ಕುಂದು ಕೊರೆತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯಲ್ಲಿ ವರ್ಷಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ ಮತ್ತು ತಾಲ್ಲೂಕು ಕಛೇರಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು. ಬ್ಯಾಂಕಿನಲ್ಲಿ ರೈತರು ಚಿನ್ನವನ್ನು ಒತ್ತೆಯಿಟ್ಟು ಸಾಲ ಪಡೆಯುವವರಿಗೆ ಇಂತಿಷ್ಟು ಚಿನ್ನವನ್ನು ಬ್ಯಾಂಕಿನಲ್ಲಿ ಒತ್ತೆಯಿಟ್ಟರೆ ಸಾಲ ದೊರೆಯುತ್ತದೆ. ಇಲ್ಲವಾದರೆ ಸಾಲ ಸಿಗುವುದಿಲ್ಲವೆಂದು ರೈತರಿಗೆ ತೊಂದರೆ ಕೊಡುತ್ತಿರುವುದರ ಸೂಕ್ತ ತಿಳುವಳಿಕೆ ನೀಡಿ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಮಂಡ್ಯ ತಾಲ್ಲೂಕು, ಕೆರಗೋಡು ಹೋಬಳಿ ಹೊನಗಳ್ಳಿಮಠ ವ್ಯಾಪ್ತಿಯ 960 ಎಕರೆ ರೈತರ ಜಮೀನು ದಾಖಲೆ ಕೈ ಪಹಣಿಯಲ್ಲಿಯೇ ಮುಂದುವರೆಯುತ್ತಿದ್ದು, ರೈತರಿಗೆ ಸರ್ಕಾರದ ಸೌಲಭ್ಯ ಬ್ಯಾಂಕ್ ಸಾಲ ನೋಂದಣಿ ಯಾವುದು ಆಗುತ್ತಿಲ್ಲ. ಕ್ರಮಬದ್ದ ಕಂಪ್ಯೂಟರ್ ಆರ್.ಟಿ.ಸಿ. ಕೊಡಬೇಕೆಂದು ಒತ್ತಾಯಿಸಿದರು. ರೈತರು ಉಪಯೋಗಿಸುವ ರಸಗೊಬ್ಬರ, ಔಷಧಿ ಮತ್ತು ಬಿತ್ತನೆಬೀಜಗಳಿಗೆ ಸಬ್ಸಿಡಿ ಹಣವನ್ನು ಹೆಚ್ಚಿಗೆ ಮಾಡಿ ರೈತರಿಗೆ ಕಡಿಮೆ ದರದಲ್ಲಿ ಸಿಗುವಂತೆ ಸರ್ಕಾರ ರೈತರ ಅಭಿವೃದ್ಧಿಗೆ ಒತ್ತುಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಉಪಾಧ್ಯಕ್ಷರಾದ ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ, ಸೋಸಿ ಪ್ರಕಾಶ್, ಮಹೇಶ್, ಶಿವಳ್ಳಿ ಚಂದ್ರಶೇಖರ್ ಹಾಗೂ ಪ. ರಾಮು, ಹೆಚ್.ಜಿ.ಪ್ರಭುಲಿಂಗು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ