Tuesday, November 24, 2026

ಪ್ರಾಯೋಗಿಕ ಆವೃತ್ತಿ

ಎಸೆಸ್ಸೆಲ್ಸಿ ಹಿಂದಿ ಪರೀಕ್ಷೆ ರದ್ದತಿಗೆ ಒತ್ತಾಯ ; ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಆಗ್ರಹ

ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದ ಪರೀಕ್ಷೆಯನ್ನು ರದ್ದುಪಡಿಸುವಂತೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆಯು ಬೆಂಗಳೂರಿನ ಮಲ್ಲೇಶ್ವರಂ ನ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕರಿಗೆ ಎಚ್ಚರಿಕೆ ಪತ್ರ ನೀಡಿದೆ.

ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ ಎಚ್ಚರಿಕೆ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ ಅಷ್ಟರ ಒಳಗೆ ನೀವು ಲಿಖಿತವಾಗಿ ಉತ್ತರಿಸಬೇಕು ಎಂದು ಹೇಳಿದ್ದಾರೆ.

ನಮ್ಮ ಬೇಡಿಕೆ ಬಿಹಾರದಲ್ಲಿ ಪಾಸ್ ವಿಥೌಟ್ ಇಂಗ್ಲಿಷ್ ಕಾನೂನಿರುವಂತೆ ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ಈ ಕೂಡಲೇ ಬರಬೇಕು, ಇಲ್ಲವಾದಲ್ಲಿ 2026 ಮಾರ್ಚ್ 30ರಂದು ನಡೆಯುವ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ಕೊಠಡಿಗೆ ರಾಜ್ಯಾದ್ಯಂತ ನುಗ್ಗಿ ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕುತ್ತೇವೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕದಂಬ ಪಡೆಯ ಚೇತನ್ ಮಾತನಾಡಿ ಎರಡು ನುಡಿ ನೀತಿ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಮೂರು ವರ್ಷ ಕಳೆದರೂ ಜಾರಿ ಮಾಡಿಲ್ಲ, ಈ ಕೂಡಲೇ ಜಾರಿ ಮಾಡದಿದ್ದರೆ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷಾ ಕೊಠಡಿಗೆ ನುಗ್ಗಿ ಉಂಟಾಗುವ ಅವಾಂತರಕ್ಕೆ ನೇರವಾಗಿ ಮುಖ್ಯಮಂತ್ರಿಯ ಸಿದ್ರಾಮಯ್ಯ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಹೆಬ್ಬಳ್ಳಿ, ನಾಗೇಶ್ ಅರಳಕುಪ್ಪೆ, ಮಂಜು ಗಣಪತಿಪುರ , ರಘುನಂದನ್, ಸಚಿನ್ ಮತ್ತಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ