Thursday, April 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದ 19 ಬಡ ಕುಟುಂಬದವರಿಗೆ ಹಕ್ಕುಪತ್ರ ನೀಡಿ, ಇ – ಸ್ವತ್ತು ಮಾಡಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು, ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂದಗಿರಿ ದೊಡ್ಡಿ ಗ್ರಾಮದಲ್ಲಿ 19 ಕುಟುಂಬಗಳು ಕಳೆದ 40 ವರ್ಷದಿಂದ ವಾಸವಿದ್ದು, ಇವರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ, ಇ-ಸ್ವತ್ತು ಮಾಡಿಕೊಟ್ಟಿರುವುದಿಲ್ಲ, ಇದರಿಂದ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

ಸುವರ್ಣ ಮತ್ತು ದೊಡ್ಡೋಳಮ್ಮ ಎಂಬುವರಿಗೆ ಸೇರಿದ 2 ಮನೆಗಳು ಮಾರಾಟವಾಗಿದ್ದು, ಅಧಿಕಾರಿಗಳು ಹಣ ಪಡೆದು ವಿಜಯ್ ಕೆ.ಜೆ ಮತ್ತು ಆಶಾ ರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ ಅವರು, ಮಂಡ್ಯ ಗ್ರಾಮಾಂತರ ಪಂಚಾಯಿತಿಯ ಎಲ್ಲಾ ಕುಟುಂಬಗಳಿಗೂ ಈ ಸ್ವತ್ತು ಮಾಡಿಕೊಟ್ಟು ಮೂಲಸೌಕರ್ಯ ಮತ್ತು ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ವಿಭಾಗೀಯ ಸಂಚಾಲಕ ಟಿ. ಡಿ ಬಸವರಾಜು,ಡಿ.ಕೆ ಅಂಕಯ್ಯ,ಶಿವು ಎಂ, ಮುರುಗನ್, ಉಮೇಶ್ ಉಮ್ಮಡಹಳ್ಳಿ, ಧನಲಕ್ಷ್ಮಿ, ನಾಗಮಣಿ, ಲಕ್ಷ್ಮಿ, ಮಾರಿಯಮ್ಮ, ಸುಶೀಲ, ಯಶೋದಮ್ಮ.ಯಲ್ಲಮ್ಮ, ಆಶಾ, ಸಿ.ಪಿ.ಸೌಮ್ಯ, ವಸಂತ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!