ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಕುರ್ಚಿ ಕದನ ಗರಿಗೆದರಿದ್ದು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವವಾದಿ, ಜಾತ್ಯಾತೀತ ಪ್ರಬುದ್ಧ ವ್ಯಕ್ತಿತ್ವ ಉಳ್ಳವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ೨ ಬಾರಿ ಮುಖ್ಯಮಂತ್ರಿಯಾಗಿ ಕೊಟ್ಟ ಮಾತಿನಂತೆ ಶೇ.೭೫ರಷ್ಟು ಮೀಸಲಾತಿ ಜಾರಿ, ಜಾರಿಗಳ ಸಮೀಕ್ಷೆ ಬಿಡುಗಡೆ ಮಾಡದೇ ವಚನ ಭ್ರಷ್ಠರಾಗಿದ್ದಾರೆ. ಹೀಗೆಂದು ಡಿ.ಕೆ.ಶಿವಕುಮಾರ್ ಅವರಿಗೂ ಸಿಎಂ ಸ್ಥಾನ ನೀಡುವ ತಪ್ಪು ಮಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದರು.
ಎಸ್ಸಿ/ಎಸ್ಟಿ ಅನುದಾನದಲ್ಲಿ ಕಳೆದ ೧೦ ವರ್ಷಗಳಿಂದ ೨ ಲಕ್ಷ ಕೋಟಿ ರೂ ವಂಚನೆ ಮಾಡಲಾಗಿದೆ. ಬಿಜೆಪಿ ಉಗ್ರ ಹಿಂದುತ್ವದ ಜೀವ ವಿರೋಧಿ ಮನುಸ್ಮೃತಿ ಜಾರಿಗೊಳಿಸಲು ಬಹುತ್ವದ ಭಾರತ ಮಹತ್ವಕ್ಕೆ ತಿಲಾಂಜಲಿ ಇಡುತ್ತಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದ ದಾರಿಯಲ್ಲಿ ಸಾಗದ ಕಾಂಗ್ರೆಸ್ ಮೃದು ಹಿಂದುತ್ ಜೀವ ವಿರೋಧಿ ಮನುಸ್ಮೃತಿ ಅನುಸರಿಸುತ್ತಿದೆ. ಅಲ್ಲದೇ ದಲತ ಸಮುದಾಯದವರನ್ನು ಸಿಎಂ ಮಾಡಲಾಗದೇ ರಾಜಕೀಯ ನೈತಿಕತೆಯ ಕಾಂಗ್ರೆಸ್ ಮರೆತಿದೆ ಎಂದು ಖಂಡಿಸಿದರು.
ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳು ನೈತಿಕ ರಾಜಕಾರಣದ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹುಜನರು ಸ್ವತಂತ್ರ ರಾಜಕೀಯ ಅಧಿಕಾರದೆಡೆಗೆ-ಪಾರ್ಲಿಮೆಂಟ್, ವಿಧಾನಸೌಧದೆಡೆಗೆ ನಮ್ಮ ನಡಿಗೆ ಘೋಷಣೆಯೊಂದಿಗೆ ರಾಜಕೀಯ ಪ್ರಜ್ಞೆ ಬೆಳಿಸಕೊಂಡು ಸಾಗುವಂತೆ ಕರೆ ನಿಡಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ವೈ.ಸುರೇಶ್ಕುಮಾರ್, ಸಿದ್ದಯ್ಯ, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ ಆನಂದ್, ತಾ.ಅಧ್ಯಕ್ಷರಾದ ಮುತ್ತುರಾಜ್, ಕರಿಯಪ್ಪ, ಕುಮಾರ್ ಇದ್ದರು.




