Friday, November 20, 2026

ಪ್ರಾಯೋಗಿಕ ಆವೃತ್ತಿ

ದಂತಗಳ ಸ್ವಚ್ಛತೆ ಉತ್ತಮ ಆರೋಗ್ಯಕ್ಕೆ ಸಹಕಾರಿ: ಅಕ್ಷಿತಾ ಅಶೋಕ್ ಜಯರಾಂ

ದಂತಗಳ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವುದು, ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ದಂತ ತಜ್ಞೆ ಡಾ.ಅಕ್ಷಿತಾ ಅಶೋಕ್‌ ಜಯರಾಂ ಸಲಹೆ ನೀಡಿದರು.

ಮಂಡ್ಯ ನಗರದ ನೆಹರು ನಗರದಲ್ಲಿರುವ ಕಾವೇರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ, ಭಾರತೀಯ ದಂತ ವೈದ್ಯಕೀಯ ಸಂಘ, ಆಯೋಜಿಸಿದ್ದ ರಾಷ್ಟ್ರೀಯ ಬಾಯಿ ಆರೋಗ್ಯ ಯೋಜನೆಯಡಿ ಹಲ್ಲುಜ್ಜುವ ವಿಧಾನ ಅಭಿಯಾನ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಟೂತ್‌ಪೇಸ್ಟ-ಬ್ರೆಷ್ ವಿತರಣೆ ಕಾರ್ಯಕ್ರಮಕ್ಕೆ ದಂತ ತಜ್ಞೆ ಡಾ.ಅಕ್ಷಿತಾ ಅಶೋಕ್‌ಜಯರಾಂ ಚಾಲನೆ ನೀಡಿ ಮಾತನಾಡಿದರು.

ದಂತಗಳ ಆರೋಗ್ಯಕ್ಕಾಗಿ ಪ್ರತಿ ಮುಂಜಾನೆೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಬಾಯಿ-ಹಲ್ಲುಗಳನ್ನು ಸ್ವಚ್ಚಗೊಳಿಸಬೇಕು. ಹಲ್ಲು ಉಜ್ಜುವ ವಿಧಾನ ತುಂಬ ಮುಖ್ಯ, ದೀರ್ಘಕಾಲ ಹಲ್ಲುಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮೂರು ತಿಂಗಳಿಗೊಮ್ಮೆ ಟೂತ್‌ ಬ್ರೆಷ್ ಬದಲಾಯಿಬೇಕು ಎಂದು ನುಡಿದರು. ಮಕ್ಕಳು ಅತಿ ಹೆಚ್ಚು ಟೂತ್‌ಪೇಸ್ಟ್ ಅನ್ನು ಬಳಸುವುದು ಬೇಡ, ಸಿಹಿ ತಿಂಡಿ ತಿಂದ ತಕ್ಷಣ ಬಾಯಿ ಶುದ್ದಗೊಳಿಸಿಕೊಳ್ಳಿ, ಬಾಯಿ ವಾಸನೆ ಬರದಂತೆ ನೋಡಿಕೊಳ್ಳಲು ನೀರು ಬಳಸಿ ಎಂದು ಕಿವಿ ಮಾತೇಳಿದರು.

ಬಳಿಕ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮನಂದ ನಾಥ ಸ್ವಾಮೀಜಿ ಮಾತನಾಡಿ, ಬಾಯಿ ವಾಸನೆ ತಡೆಯಲು ಹಲ್ಲುಗಳ ಸ್ವಚ್ಚತೆ ಅವಶ್ಯ. ಮಕ್ಕಳು ಪ್ರತಿನಿತ್ಯ ಹಲ್ಲುಗಳನ್ನು ಎರಡು ಬಾರಿ ಸ್ವಚ್ಚಗೊಳಿಸಿಕೊಳ್ಳಿ, ನಮ್ಮ ಕಾಲದಲ್ಲಿ ಇದ್ದಿಲು, ಹಲ್ಲುಪುಡಿ ಬಳಸಿ ಹಲ್ಲುಗಳನ್ನು ಉಜ್ಜುತ್ತಿದ್ದೆವು. ಈಗ ವೈಜ್ಞಾನಿಕ ವಿಧಾನಗಳು ಬಂದಿವೆ. ದಂತತಜ್ಞರ ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

ವಿದ್ಯೆಯನ್ನು ಇಷ್ಟಪಟ್ಟು ಕಲಿಯಿರಿ, ಕಟ್ಟಪಟ್ಟು ದುಡಿಯಿರಿ, ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ನಮ್ಮ ಗುರಿಯಾಗಿದೆ, ಹಿರಿಯರ ಮಾರ್ಗದರ್ಶನ , ಶಿಕ್ಷಕರ ಬೋದನೆ ಸಮಗ್ರವಾಗಿ ಪಡೆದುಕೊಳ್ಳಿ, ಸಾಧನೆ ಮಾಡುವ ಹಂಬಲ ನಿಮ್ಮದಾಗಿರಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪೋಷಕರಾದ ಡಾ.ಪರಮೇಶ್ ಅವರ ಪುತ್ರಿಯರಾದ ರಿದಿ,ಅದಿತಿ ಮತ್ತು ಅಶೋಕ್‌ ಜಯರಾಂ ಪುತ್ರಿ ಲಕ್ಷ್ಯ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಟೂತ್‌ಪೇಸ್ಟ್-ಬ್ರೆಷ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಿಬ್ಬಂದಿಗಳಾದ ರವಿ, ಪ್ರತಾಪ್, ಜಗ, ಮಧು ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ