ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ರೇಪ್ ಅಂಡ್ ಮರ್ಡರ್ ಪ್ರಕರಣ ಸೇರಿದಂತೆ ಹಲವು ಕೊಲೆ, ಸುಲಿಗೆ ಪ್ರಕರಣಗಳ ಕುರಿತಂತೆ ವಿವರವಾದ ಮಾಹಿತಿ ನೀಡುತ್ತಿದ್ದ ಸುಮಾರು 39 ನಿಮಿಷಗಳ ‘ಧರ್ಮಸ್ಥಳ HORROR’ ವಿಡಿಯೋವನ್ನು ಯುಟ್ಯೂಬ್ ನಿಂದ ಬ್ಲಾಕ್ ಮಾಡಿಸಲಾಗಿದೆ ಎಂದು ಸ್ವತಃ ಯುಟ್ಯೂಬರ್ ಸಮೀರ್ ಎಂ.ಡಿ. ತಿಳಿಸಿದ್ದಾರೆ.
ಈ ಬಗ್ಗೆ ವೀಡಿಯೋ ಹೇಳಿಕೆ ನೀಡಿರುವ ಅವರು, ನನ್ನ ಧರ್ಮಸ್ಥಳ HORROR ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಲಭ್ಯವಾಗುತ್ತಿಲ್ಲ, ಇಂತಹ ಕಚಡಾ ಕೆಲಸವನ್ನು ಯಾರು ಮಾಡಿಸಿದ್ಧಾರೆಂಬುದು ಎಲ್ಲರಿಗೂ ಗೊತ್ತಿದೆ. ನಾವು ಮತ್ತೇ ಯುಟ್ಯೂಬ್ ನಲ್ಲಿ ವಿಡಿಯೋ ಬರುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಧರ್ಮಸ್ಥಳ HORROR ವಿಡಿಯೋವು ಸುಮಾರು 2 ಕೋಟಿ ಜನರಿಂದ ವೀಕ್ಷಣೆಯಾಗಿತ್ತಲ್ಲದೇ, ಎಲ್ಲೆಡೆ ವೈರಲ್ ಆಗಿತ್ತು.




