ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷರಾದ ನಾಗೇಶಾಚಾರ್ ಹಾಗೂ ಎ.ಸುರೇಶ್, ಉಮಾಶಂಕರ್ ಹಾಗೂ ರವಿ ಅವರು ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘ (ನೊಂ) ಪದಾಧಿಕಾರಿಗಳನ್ನು ಭೇಟಿ ಮಾಡಿ ಡಿಜಿ ಇಮೇಜ್ ಹಾಗೂ ಸಂಘಟನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾಗಿ ಅಂತರ ರಾಷ್ಟ್ರೀಯ ರೋಟರಿಯ ಮದ್ದೂರು ಅಧ್ಯಕ್ಷರಾಗಿರುವ ಎಂ.ಸಿ.ಶಶಿಗೌಡ ಅವರನ್ನು ಅಭನಂದಿಸಿದರು.
ಈ ಸಂದರ್ಭದಲ್ಲಿ ಛಾಯಾ ಕ್ಷೇಮಾಭಿವೃದ್ಧಿ ಸಂಘ (ನೊಂ) ದ ಉಪಾಧ್ಯಕ್ಷ ಸಿ.ರಾಜಶೇಖರಮೂರ್ತಿ, ಖಜಾಂಚಿ ಎಂ.ಎಸ್.ನಟೇಶ್, ಕಾರ್ಯದರ್ಶಿ ಎಂ.ಆರ್. ರಾಜೇಶ್, ನಿರ್ದೇಶಕರಾದ ಶಂಕರ್, ಉಮೇಶ್, ಸಂಜು, ಬೆಸಗರಹಳ್ಳಿ ರಾಜೇಶ್ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ದರ್ಶನ್ ಗೌಡ ಹಾಗೂ ಮಹಾದೇವಪ್ಪ , ನಿರಂಜನ್, ರಾಹುಲ್ ಮತ್ತು ಅನೇಕ ಛಾಯಾ ಮಿತ್ರರು ಸಹಇದ್ದರು.




