Friday, November 20, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು- ಜ್ಞಾನಾರ್ಜನೆ ಮುಖ್ಯ: ಚಲುವರಾಯಸ್ವಾಮಿ

ವಿದ್ಯಾರ್ಥಿ ಜೀವನದಲ್ಲಿ ಗುರಿಮುಟ್ಟಿ ಸಾಧನೆ ಮಾಡಲು ಶಿಸ್ತು ಹಾಗೂ ಜ್ಞಾನಾರ್ಜನೆ ಮುಖ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಇಂದು (ಫೆ.18) ರಂದು ನಡೆದ ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಬೆಂಗಳೂರು, ಕೃಷಿ ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ಅವಕಾಶಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಶಾಲಾ ಹಾಗೂ ಕಾಲೇಜು ಹಂತದಲ್ಲಿ ಹೆಚ್ಚಿನ ಶ್ರಮವಹಿಸಿದರೆ ಉನ್ನತ ಹುದ್ದೆಯನ್ನು ಅಲಂಕರಿಸುವುದರ ಜೊತೆಗೆ ತಮ್ಮ ಕುಟುಂಬ ಹಾಗೂ ದೇಶದ ಪ್ರಗತಿಗೆ ಕೈ ಜೋಡಿಸಬಹುದು ಎಂದರು.

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೇ 99 ಗಳಿಸಿದರು ಸಹ ಕಡಿಮೆ ಎಂಬ ಭಾವನೆ ಇದೆ‌. ಆದರಿಂದ ಸಮಯ ವ್ಯರ್ಥ ಮಾಡದೆ ಜ್ಞಾನವನ್ನು ಹೆಚ್ಚಿಸಿಕೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮುಂದಿನ ಜೀವನ ಸುಖಕರವಾಗಿರುತ್ತದೆ ಎಂದು‌ ಕಿವಿಮಾತು ಹೇಳಿದರು.

ಕೃಷಿ ಪದವಿ ಹಾಗೂ ಡಿಪ್ಲೊಮಾ ಸೇರಿದಂತೆ ಇನ್ನಿತರೆ ಪದವಿಗಳ ಪ್ರವೇಶಾತಿಗೆ ಸುಮಾರು ಒಂದು ಲಕ್ಷ ಅರ್ಜಿ ಬಂದರೆ 5 ಸಾವಿರ ಜನರಿಗೆ ಮಾತ್ರ ಪ್ರವೇಶಾತಿ ನೀಡಲು ಸಾಧ್ಯವಾಗುತ್ತಿತ್ತು. ಇದನ್ನು ಮನಗಂಡು ಹಿಂದಿನ ಸಾಲಿನಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ 2 ಖಾಸಗಿ ಕೃಷಿ ವಿಶ್ವವಿದ್ಯಾಲಯವನ್ಬು ಪ್ರಾರಂಭಿಸಲಾಗಿದೆ ಎಂದರು.

ಕೃಷಿ ಕೂಡ ಲಾಭದಾಯಕ ಹುದ್ದೆ. ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳ ಪಡೆಯುವುದರ ಬದಲು ಕೃಷಿಯಲ್ಲಿ ಉತ್ತಮ ಆದಾಯ ಪಡೆದು ಉತ್ತಮ ಆರ್ಥಿಕ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಆನೇಕ ನಿದರ್ಶನಗಳಿವೆ‌ ಎಂದರು.

ಕೃಷಿಯಲ್ಲಿ ಹೊಸ ತಂತ್ರಜ್ಞಾನ, ತಳಿಗಳ ಬಳಕೆ ಮಾಡಿಕೊಂಡು 50 ವರ್ಷದ ಹಿಂದೆ ಇದ್ದ ಆಹಾರದ ಕೊರತೆಯನ್ನು ನೀಗಿಸಿ ಇಂದು ರಫ್ತು ಮಾಡುವ ಸ್ಥಿತಿಗೆ ನಮ್ಮ ದೇಶ ಬೆಳೆದಿದೆ. ಕೃಷಿ ಕ್ಷೇತ್ರದಲ್ಲೂ ಇಂದು ಅನೇಕ ಅವಕಾಶಗಳಿವೆ ಎಂದರು.

ಕೃಷಿ ಪಾರಂಪರಿಕವಾಗಿ ಬಂದಂತಹದ್ದು ಅದಕ್ಕೆ ಶಿಕ್ಷಣದ ಅವಶ್ಯಕತೆಯಿದೆಯಾ…? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುವುದು ಸಹಜ ಆದರೆ ಕೃಷಿಯು ಎಲ್ಲರೂ ತಿಳಿದಷ್ಟು ಸುಲಭದ ಉದ್ಯೋಗವೇನು ಅಲ್ಲ, ಒಬ್ಬ ರೈತ ವ್ಯವಸಾಯ ಮಾಡಬೇಕೆಂದರೆ ಅನೇಕ ಏರುಪೆರುಗಳನ್ನ ವಾತಾವರಣದಲ್ಲಿ ಕಾಣುತ್ತಾನೆ. ಇವುಗಳನ್ನು ನಿಭಾಯಿಸಲು ಕೃಷಿ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಮುಡಾ ಅಧ್ಯಕ್ಷ ನಹೀಮ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ವಿ.ಸಿ.ಫಾರಂ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ: ಪಿ.ಎನ್ ಫಾತೀಮಾ, ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಡಾ.ಹೆಚ್.ಎಲ್ ಹರೀಶ್, ಸದಸ್ಯ ಕುಮಾರಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ