Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಿಕೆಶಿ ಕೈ ಹಿಡಿದು ರಾಹುಲ್ ಗಾಂಧಿ ರನ್ನಿಂಗ್

ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಬಾವುಟ ಹಿಡಿಸಿ ಕೆಲ ದೂರ ರನ್ನಿಂಗ್ ಮಾಡಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಕಾಂಗ್ರೆಸ್ ಬಾವುಟ ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಓಡಲು ಶುರು ಮಾಡುತ್ತಿದ್ದಂತೆ ಅವರ ಪಕ್ಕದಲ್ಲೇ ನಡೆದು ಬರುತ್ತಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಕೆ ಹಾಕುತ್ತಾ ಖುಷಿಯಿಂದ ಅವರ ಹಿಂದೆಯೇ ಓಡಿ ಬಂದಿದ್ದಾರೆ.

ಮೊನ್ನೆಯಷ್ಟೇ ಸಿದ್ದರಾಮಯ್ಯ ಜೊತೆ ಓಡಿದ್ದ ರಾಹುಲ್ ಗಾಂಧಿ, ಇಂದು ಬಸವನಗುಡಿ ಬಳಿ ಡಿ.ಕೆ.ಶಿವಕುಮಾರ್ ಕೈ ಹಿಡಿದುಕೊಂಡು ಹೈಸ್ಪೀಡ್ ರನ್ನಿಂಗ್ ಮಾಡಿದ್ದಾರೆ. ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್ ಗಾಂಧಿ ಸುಮಾರು 100 ಮೀಟರ್ ನಷ್ಟು ದೂರ ಒಂದೇ ಸಮನೇ ಓಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಜಡಿ ಮಳೆಗೂ ಜಗ್ಗದೆ ರಾಹುಲ್ ಗಾಂಧಿ ರನ್ನಿಂಗ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಹುರಿದುಂಬಿಸಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ರಾಹುಲ್ ಜತೆ ಓಡಿರುವ ವೀಡಿಯೋ ಟ್ವಿಟ್ ಮಾಡಿ ಕೆಲವು ದಿನ ನೀವು ನಡೆಯಬೇಕು. ಕೆಲವು ದಿನ ಓಡಬೇಕು. ಕನಸಿನ ಗುರಿ ಮುಟ್ಟಲು ಎರಡೂ ಮುಖ್ಯ ಎಂದು ಪೋಸ್ಟ್ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ